Jun 8, 2023, 10:25 AM IST
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತು ಸ್ಟೇಟಸ್ ಹಾಕಿ, ಶಿವಾಜಿಗೆ ಅಪಮಾನ ಮಾಡಿದ ಪೋಸ್ಟ್‌ನನ್ನು ಖಂಡಿಸಿ ಕೆಲವು ಹಿಂದೂ ಸಂಘಟನೆಗಳು ಬುಧವಾರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ಮತ್ತು ಬಂದ್ ನಡೆಸಿದ್ದವು. ಇದೀಗ ಬಲಪಂಥೀಯರ ಈ ಬಂದ್‌ನನ್ನು ಖಂಡಿಸಿ ವಿರೋಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸಂಘಟನೆಗಳು ಕರೆ ನೀಡಿದ್ದವು. ಅಲ್ಲದೇ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಜೂ.19 ರವರೆಗೆ ಕೊಲ್ಲಾಪುರದಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ಮಹಾರಾಷ್ಟ್ರ ಸಿಎಂ ಶಿಂಧೆ ಶಾಂತಿ ಕಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಮೊದಲ ಶಾಸಕಾಂಗ ಸಭೆ: ವಿಪಕ್ಷ ನಾಯಕನ ಆಯ್ಕೆ, ಸೋಲಿನ ಪರಾಮರ್ಶೆ ಬಗ್ಗೆ ಚರ್ಚೆ ಸಾಧ್ಯತೆ..?