May 29, 2023, 10:21 AM IST
ಪಾರ್ಲಿಮೆಂಟಿನ ಸೆಂಗೋಲ್‌ಗೂ ಕರುನಾಡಿನ ಮಠ-ಮಂದಿರಕ್ಕೂ ನಂಟಿದೆ ಎನ್ನಲಾಗ್ತಿದೆ. ನೂತನ ಸಂಸತ್ ಭವನ ವಿಧ್ಯುಕ್ತವಾಗಿ ಉದ್ಘಾಟನೆಯಾಗಿದೆ. ವಿಪಕ್ಷಗಳು, ಎದುರಾಳಿಗಳು ಎಷ್ಟೆಲ್ಲಾ ವಿರೋಧಿಸಿದರೂ, ಪ್ರಧಾನಿ ಮೋದಿ ಮಾತ್ರ ಮಾಡಬೇಕಾಗಿದ್ದ ಕಾರ್ಯವನ್ನ ಯಶಸ್ವಿಯಾಗಿ, ಅಭೂತಪೂರ್ವವಾಗಿ ನಿಭಾಯಿಸಿದ್ದಾರೆ. ಭಾರತದ ಇತಿಹಾಸದಲ್ಲಿ ದಾಖಲಾಗದ ಅಪೂರ್ವ ಮೈಲುಗಲ್ಲೊಂದನ್ನ, ನರೇಂದ್ರ ಮೋದಿ ನಿರ್ಮಿಸಿದ್ದಾರೆ. 1947ರಲ್ಲಿ ಭಾರತಕ್ಕೆ ಸ್ವಾಂತಂತ್ಯ್ರ ನೀಡೋದಕ್ಕೆ, ಬ್ರಿಟೀಷರು ಮುಂದಾದ್ರು. ಆದ್ರೆ ಅಧಿಕಾರ ಹಸ್ತಾಂತರಿಸೋಕೆ ಏನಾದ್ರು ಪ್ರಕ್ರಿಯೆ ಇದೆಯಾ ಅಂತ ನೆಹರು ಅವರನ್ನ ಮೌಂಟ್ ಬ್ಯಾಟನ್ ಕೇಳಿದ್ರು. ಆಗ ರಾಜಾಜಿ ಅಂತಲೇ ಕರೆಸಿಕೊಳ್ತಿದ್ದ ಸಕ್ರವರ್ತಿ ರಾಜಗೋಪಾಲಾಚಾರಿ ಅವರ ಸಲಹೆಯನ್ನು ನೆಹರು ಪಡೆದಿದ್ರು. ನಂತರ, ರಾಜಾಜಿ ಅವರೇ ತಮಿಳುನಾಡಿನ ಶೈವ ಮಠವೊಂದಕ್ಕೆ ರಾಜದಂಡ ನಿರ್ಮಿಸಿ, ಅಧಿಕಾರ ಹಸ್ತಾಂತರ ಮಾಡೋ ಪ್ರಕ್ರಿಯೆಗೆ ಜೀವತುಂಬಿದ್ರು.
ಇದನ್ನೂ ವೀಕ್ಷಿಸಿ: ನವ ಭಾರತದ ನೂತನ ಗುರುತು ಸೆಂಟ್ರಲ್ ವಿಸ್ತಾ: 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕಟ್ಟಡ !