ಆಸ್ಪತ್ರೆ ವಾರ್ಡ್‌ ಒಳಗೇ ಕೊಳಚೆ ನೀರು: ಅಲ್ಲೇ ರೋಗಿಗಳಿಗೆ ಟ್ರೀಟ್ಮೆಂಟ್!

Jul 16, 2020, 4:58 PM IST

ಹೈದರಾಬಾದ್(ಜು.16) ಒಂದೆಡೆ ಕೊರೋನಾ ಆತಂಕ ಸೃಷ್ಟಿಸಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ.. ಹೀಗಿರುವಾಗ ಹೈದರಾಬಾದ್‌ನ ಒಸ್ಮಾನಿಯಾ ಆಸ್ಪತ್ರೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಹೌದು ಈ ಆಸ್ಪತ್ರೆಯ ವಾರ್ಡ್‌ನೊಳಗೇ ಕೊಳಚೆ ನೀರು ಹರಿಯುತ್ತಿದ್ದು, ರೋಗಿಗಳು ಆ ನೀರಿನ ನಡುವೆ ಇರುವ ಬೆಡ್‌ಗಳ ಮೇಲೆ ಮಲಗಿಕೊಂಡಿದ್ದಾರೆ. ವಾರ್ಡ್‌ನಲ್ಲಿ ಮೊಣಕಾಲಿನವರೆಗೂ ಕೊಳಚೆ ನೀರು ಹರಿಯುತ್ತಿರುವ ದೃಶ್ಯ ಸದ್ಯ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಳೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಆಸ್ಪತ್ರೆ ಸಿಬ್ಬಂದಿ ಈ ಬಗ್ಗೆ ತಕೆ ಕೆಡಿಸಿಕೊಳ್ಳುತ್ತಿಲ್ಲ. ರೋಗಿಗಳನ್ನು ಅಲ್ಲಿಂದ ಬೇರೆಡೆ ಸ್ತಳಾಂತರಿಸುವ ಕಾರ್ಯವನ್ನೂ ಆರಂಭಿಸಿಲ್ಲ.