Mood Of The Nation Survey: ಮೋದಿ ಮತ್ತೆ ಪ್ರಧಾನಿಯಾಗಲಿ ಎಂದವರೆಷ್ಟು? ಈ ಸರ್ಕಾರದ ಆಡಳಿತದ ಬಗ್ಗೆ ಜನ ಹೇಳಿದ್ದೇನು ?

Apr 1, 2024, 12:18 PM IST

ಪ್ರಧಾ ನರೇಂದ್ರ ಮೋದಿ ಅವರು ಎರಡು ಅವಧಿಯ ಅಧಿಕಾರಾವಧಿಯಲ್ಲಿ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ನಾಯಕರಾಗಿ ತಮ್ಮ ಸ್ಥಾನವನ್ನು ಮತ್ತಷ್ಟು  ಭದ್ರಪಡಿಸಿಕೊಂಡಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ನಡೆಸಿದ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಡಿಜಿಟಲ್ ಸಮೀಕ್ಷೆಯು(Mood Of The Nation survey) ತಿಳಿದುಬಂದಿದೆ. ಮಾರ್ಚ್ 13 ರಿಂದ ಮಾರ್ಚ್ 27 ರವರೆಗೆ ನಡೆಸಿದ ಸಮೀಕ್ಷೆಯಲ್ಲಿ 7,59,340 ಪ್ರತಿಕ್ರಿಯೆಗಳು ಲಭಿಸಿವೆ. ಶೇ. 78.6ರಷ್ಟು ಜನರು ಎನ್‌ಡಿಎ(NDA) ಪರವಾಗಿ ಮತ ಚಲಾಯಿಸಿದ್ದರೆ, ಶೇ. 21.4 ಮಂದಿ ಇಂಡಿಯಾ ಮೈತ್ರಿಯನ್ನು(INDIA) ಬೆಂಬಲಿಸಿದ್ದಾರೆ. ಮುಂದಿನ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಶೇ.51.6ರಷ್ಟು ಮಂದಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ರಾಹುಲ್‌ ಗಾಂಧಿ(Rahul Gandhi) ಅವರು ಶೇ. 46.45ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಸಮೀಕ್ಷೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 51.07 ರಷ್ಟು ಜನರು ನರೇಂದ್ರ ಮೋದಿ(Narendra Modi) ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  INDIA Alliance: ಕೇಂದ್ರದ ವಿರುದ್ಧ ಇಂಡಿಯಾ ಮೈತ್ರಿಕೂಟ ರಣಕಹಳೆ: ಮೋದಿ ವಿರುದ್ಧ ‘ಲೋಕತಂತ್ರ ಬಚಾವೋ’ ಹೋರಾಟ!