UP Election 2022: ಬಿಜೆಪಿ ಸಂಸದೆ ರೀಟಾ ಜೋಶಿ ಪುತ್ರ ಎಸ್ಪಿಗೆ ಸೇರ್ಪಡೆ

Mar 6, 2022, 11:15 AM IST

ಲಕ್ನೋ(ಮಾ.06): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್‌ ಜೋಶಿ ವಿಚಾರವಾಗಿ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿತ್ತು.ಈಗ ಆ ಚರ್ಚೆಗಳು ನಿಜವಾಗಿವೆ. ಇದೀಗ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್‌ ಜೋಶಿ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಯಾಂಕ್‌ ಜೋಶಿ ಲಕ್ನೋ ಕ್ಯಾಂಟ್‌ನಿಂದ ಟಿಕೆಟ್‌ ಬಯಸಿದ್ದರು. ಇನ್ನು ಮಾಯಾವತಿ ಆಪ್ತ ಕುಂವರ್‌ ಪತೆಹ್‌ ಬಹಾದ್ದೂರ್‌ ಕೂಡ ಎಸ್ಪಿಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮುನ್ನ ಯುಪಿಯಲ್ಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್‌ ಜೋಶಿ ವಿಚಾರವಾಗಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು. 

ಅಪ್ಪಳಿಸಲಿದೆ ಸುನಾಮಿ-ಸುಂಟರಗಾಳಿ, ಮಿಸ್ಸೆ ಇಲ್ವಂತೆ ಭಯಾನಕ ಭೂಕಂಪ, ಬಬಲಾದಿ ಮಠದ ಭವಿಷ್ಯ!