Army Rescues Trekker : ಪರ್ವತಗಳ ಸಾಲಿನಲ್ಲಿ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಸೇನೆ!

Feb 10, 2022, 9:05 PM IST

ಪಾಲಕ್ಕಾಡ್ (ಫೆ. 10): ಮಲಂಪುಳ ಬೆಟ್ಟದಲ್ಲಿ (Malampuzha Mountain) ಚಾರಣಕ್ಕೆ ಹೋಗಿ ಪರ್ವತಗಳ ನಡುವೆ ಸಿಕ್ಕಿಬಿದ್ದಿದ್ದ ಯುವಕನನ್ನು ಭಾರತೀಯ ಸೇನೆ (Indian Army) ಸಾಹಸದ ಕಾರ್ಯಾಚರಣೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 43 ಗಂಟೆಗಳ ಕಾಲ ಬೆಟ್ಟಗಳ ನಡುವೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತು.

2 ದಿನ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಕೊನೆಗೂ ರಕ್ಷಿಸಿದ ಸೇನೆ, ರಕ್ಷಣಾ ಕಾರ್ಯ ಪೂರ್ಣ!
ಕೇರಳದ ಮಲಂಪುಳ ಪರ್ವತಗಳ ಬಂಡೆಕಲ್ಲಿನ ನಡುವೆ ಸಿಲುಕಿದ್ದ ಯುವಕನನ್ನು ಸತತ ಕಾರ್ಯಾಚರಣೆಯ ಬಳಿಕ ಭಾರತೀಯ ಸೇನೆಯು ಬುಧವಾರ ಯಶಸ್ವಿಯಾಗಿ ರಕ್ಷಣೆ ಮಾಡಿದೆ. ಮಲಂಪುಳದ 23 ವರ್ಷದ ಬಾಬು ಸೋಮವಾರ (ಫೆ.8) ಮೂವರು ಸ್ನೇಹಿತರ ಜೊತೆಗೆ ಚಾರಣಕ್ಕೆ ತೆರಳಿದ್ದ, ಈ ವೇಳೆ ಮಾರ್ಗ ಮಧ್ಯೆ ಕಾಲು ಜಾರಿ ಕಡಿದಾದ ಬೆಟ್ಟದ ನಡುವೆ ಸಿಲುಕಿ ಬಿದ್ದಿದ್ದ. ಅಂದಾಜು 1 ಸಾವಿರ ಮೀಟರ್ ಎತ್ತರದ ಬೆಟ್ಟ ಇದಾಗಿದ್ದು, ಕಳೆದೆರಡು ದಿನಗಳಿಂದ ಅನ್ನಾಹಾರಗಳಿಲ್ಲದೆ ಹೋರಾಟ ನಡೆಸಿದ್ದ. ಅಂತಿಮವಾಗಿ ಮಂಗಳವಾರ ರಾತ್ರಿ ಕೇರಳ ಸರ್ಕಾರದ (Kerala Government) ಮನವಿ ಮೇರೆಗೆ ಭಾರತೀಯ ಸೇನೆಯು ಯಶಸ್ವಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ.