ಎಲ್ಲರೂ ಯಾಕೆ ಕೇಸರಿ ಶಾಲು ಹಾಕಿದ್ದೀರಾ ? ನೀವು ಒಬ್ಬರೇನಾ ರಾಮನ ಭಕ್ತರು, ನಾವಲ್ವಾ ಎಂದ ಸಿಎಂ

Feb 13, 2024, 4:15 PM IST

ರಾಜ್ಯ ವಿಧಾನ ಮಂಡಲದ ಬಜೆಟ್ ಶುರುವಾಗಿದೆ. ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್(Thawar Chand Gehlot) ಭಾಷಣ ಮಾಡಿದ್ರು.. ಪಂಚ ಗ್ಯಾರಂಟಿ ದೇಶಕ್ಕೆ ಮಾದರಿ.. ಅನುದಾಯ ಅನ್ಯಾಯ ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಕ್ಕೆ ಬಿಜೆಪಿಗರು(BJP) ಆಕ್ರೋಶ ಹೊರ ಹಾಕಿದ್ರು. ರಾಜ್ಯಪಾಲರ ಬಾಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ ಎಂದು ಬಿಜೆಪಿ ಕಿಡಿಕಾರಿದ್ರೆ, ಜೆಡಿಎಸ್ ನವರು(JDS) ಮಾತ್ರ ಈ ಭಾಷಣದಲ್ಲಿ ಉಪ್ಪು ಹುಳಿ ಖಾರವೇ ಇಲ್ಲ ಎಂದ್ರು. ಇನ್ನೊಂದೆಡೆ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ್ರು. ಸದನದಲ್ಲೇ ಬಿಜೆಪಿಗರು ಜೈ ಶ್ರೀರಾಮ್ ಅಂದ್ರೆ ಕಾಂಗ್ರೆಸ್(Congress) ಶಾಸಕರು, ಜೈ ಭೀಮ್, ಜೈ ಬಸವಣ್ಣ ಎಂದು ಘೋಷಣೆ ಕೂಗಿದರು. ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು, ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಪಂಜಾಬ್, ದೆಹಲಿಯಲ್ಲಿ ಆಪ್ ಗೆಲ್ಲಿಸಿ ಎಂದು ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದೇ ತಡ, ಇಂದು ಪಂಜಾಬ್ನಲ್ಲಿ ಮಾತಾಡಿದ ಖರ್ಗೆ, ಯಾರು ಬರಲಿ,. ಬಾರದಿರಲಿ. ಕಾಂಗ್ರೆಸ್ ಏಕಾಂಗಿಯಾಗಿಯೇ ಹೋರಾಟ ಮಾಡುತ್ತೆ ಎಂದು ಟಾಂಗ್ ಕೊಟ್ಟರು. 

ಇದನ್ನೂ ವೀಕ್ಷಿಸಿ:  ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ: ಅನ್ನದಾತನ ತಡೆಯಲು ಬ್ಯಾರಿಕೇಡ್‌, ತಂತಿಬೇಲಿ ನಿರ್ಮಾಣ