ಗುಡ್‌ ನ್ಯೂಸ್: ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪ್ರಮಾಣ ಇಳಿಮುಖ!

Jul 7, 2020, 1:20 PM IST

ಬೆಂಗಳೂರು(ಜು.07): ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾ ಹತ್ತಿಕ್ಕುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಇಲ್ಲಿ ಮೂರು ವಾರಗಳಿಂದ ಸೋಂಕಿತರ ಪ್ರಮಾಣ ಇಳಿಮುಖವಾಗಲಾರಂಭಿಸಿದೆ. 

ಹೌದು ದೆಹಹಲಿಯಲ್ಲಿ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದುದರಿಂದ ಅನೇಕರಲ್ಲಿ ಆತಂಕ ಮನೆ  ಮಾಡಿತ್ತು. ಆದರೀಗ ಇಲ್ಲಿ ಟೆಸ್ಟಿಂಗ್ ಪ್ರಮಮಾಣ ಹೆಚ್ಚಿಸಿದ್ದು, ಕಳರೆದ ಮೂರುಉ ವಾರಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಇಳಿಯಲಾರಂಭಿಸಿದೆ. 

ಇಲ್ಲಿ ನಿತ್ಯವೂ ಮೂರೂವರೆ ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೀಗ ಈ ಸಂಖ್ಯೆ ಕುಸಿದು ಒಂದೂವರೆ ಸಾವಿರಕ್ಕೆ ಬಂದಿದೆ.