Sep 4, 2023, 10:37 AM IST
ಜಿ-20 ಸಭೆ( G20 summit) ದೆಹಲಿಯಲ್ಲಿ ನಡೆಯಲಿದ್ದು, ವಿಶ್ವದ ಗಣ್ಯರ ಸ್ವಾಗತಕ್ಕೆ ಭಾರತ(India) ಸಜ್ಜಾಗುತ್ತಿದೆ. ಗಣ್ಯಾತಿಗಣ್ಯರ ಸ್ವಾಗತ, ಆತಿಥ್ಯ, ಭದ್ರತೆಗೆ ಭಾರತದಿಂದ ಸಿದ್ಧತೆ ನಡೆಸಲಾಗುತ್ತಿದೆ. ವಿಶ್ವ ನಾಯಕರ ಕರೆತರಲು ಬುಲೆಟ್ ಫ್ರೂಪ್ ಕಾರುಗಳ(Bulletproof car) ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಗಣ್ಯರ ಸಂಚಾರಕ್ಕೆ 20 ಬುಲೆಟ್‍ಪ್ರೂಫ್ ಕಾರುಗಳು, ಪ್ರತಿಷ್ಠಿತ ಹೋಟೆಲ್‍ಗಳಲ್ಲಿ ವಿದೇಶಿ ದಿಗ್ಗಜರ ಆತಿಥ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ದೆಹಲಿಯಲ್ಲಿ(Delhi) ಒಟ್ಟು 1,30,000 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ದೆಹಲಿ ಪೊಲೀಸರು, ಕೇಂದ್ರ ಭದ್ರತಾ ಪಡೆಗಳಿಂದ ಸೆಕ್ಯೂರಿಟಿ, ಉಗ್ರ ಚಟುವಟಿಕೆಗಳ ಮೇಲೆ ವಾಯುಪಡೆ ಹದ್ದಿನ ಕಣ್ಣು ಇಟ್ಟಿದೆ. ಭದ್ರತೆ ದೃಷ್ಟಿಯಿಂದ ದೆಹಲಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆಯನ್ನೂ ಸಹ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಗೆ ಗ್ರೀನ್ ಸಿಗ್ನಲ್: ವೃಕ್ಷ ಫೌಂಡೇಶನ್ ಅರ್ಜಿ ರದ್ದುಗೊಳಿಸಿದ ಹೈಕೋರ್ಟ್