ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ENBA ಅತ್ಯುತ್ತಮ ಕರೆಂಟ್ ಅಫೇರ್ಸ್ ಪ್ರಶಸ್ತಿ!

Aug 27, 2023, 9:08 PM IST

ಏಷ್ಯಾನೆಟ್ ಸುವರ್ಣನ್ಯೂಸ್‌ ಪ್ರತಿಷ್ಠಿತ ENBA ಪ್ರಶಸ್ತ ಗೆದ್ದುಕೊಂಡಿದೆ . ಇದರಲ್ಲಿ ಮುರುಘಾ ಶ್ರೀ ಅತ್ಯಾಚಾರ ಪ್ರಕರಣ ಕುರಿತ ವರದಿಗೆ ಅತ್ಯುತ್ತಮ ಕರೆಂಟ್ ಅಫೈರ್ಸ್ ಪ್ರಶಸ್ತಿ ಒಲಿದಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಶಸ್ತಿ ಸ್ವೀಕರಿಸಿದರು. ಸಂಜೆ 7 ಗಂಟೆಗೆ ಪ್ರಸಾರವಾಗುವ ಲೆಫ್ಟ್ ಅಂಡ್ ರೈಡ್ ಕಾರ್ಯಕ್ರಮದಲ್ಲಿ ಸವಿಸ್ತರವಾಗಿ ಮುರುಘಾ ಮಠದ ಶ್ರೀಗಳ ಅತ್ಯಾಚಾರ ಪ್ರಕರಣ ವರದಿ ಪ್ರಸಾರ ಮಾಡಲಾಗಿತ್ತು. ಇಂಚಿಂಚು ಮಾಹಿತಿ ನೀಡುವ ಮೂಲಕ ಪ್ರಕರಣದ ಅಸಲಿ ಮುಖಗಳನ್ನು ಬಯಲಿಗೆಳೆಯಲಾಗಿತ್ತು. ಇದೀಗ ನಿರ್ಭೀತ ವರದಿಗೆ ಪ್ರಶಸ್ತಿ ಅರಸಿ ಬಂದಿದೆ.