ವಾರಣಾಸಿಯಲ್ಲಿ ಸಿದ್ಧವಾಗಲಿದೆ ಕ್ರಿಕೆಟ್ ಕಾಶಿ! ತ್ರಿಶೂಲದಂತೆ ಫ್ಲಡ್ಲೈಟ್, ಢಮರುಗದಂತೆ ಪ್ರವೇಶ ದ್ವಾರ!

Sep 22, 2023, 12:57 PM IST

ಶಿವನ ತಲೆ ಮೇಲಿರುವ ಅರ್ಧಚಂದ್ರಾಕೃತಿಯಂತೆ ಮೇಲ್ಛಾವಣೆ ನಿರ್ಮಿಸಲಾಗಿದೆ. ಫ್ಲಡ್ಲೈಟ್ಗಳನ್ನ ದೊಡ್ಡ ತ್ರಿಶೂಲದ ಆಕೃತಿಯ ಕಂಬಗಳಲ್ಲಿ ಅಳವಡಿಸಲಾಗಿದೆ. ಪೆವಿಲಿಯನ್ ಮತ್ತು ವಿಐಪಿ ಲಾಂಜ್ಗಳ ಗುಮ್ಮಟವು ಢಮರುಗ ರೀತಿ ಮಾಡಲಾಗಿದೆ. ಇನ್ನು ಗ್ಯಾಲರಿಯ ಆಸನ ವ್ಯವಸ್ಥೆಯನ್ನು ಕಾಶಿ ಘಾಟ್ಗಳ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಸ್ಟೇಡಿಯಂನ ಗೇಟುಗಳು ಬಿಲ್ವ ಪತ್ರೆಯ ರೀತಿಯಲ್ಲಿವೆ. ಇನ್ನು ಈ ಕ್ರೀಡಾಂಗಣ 32 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಹೊಸ ಸ್ಟೇಡಿಯಂ 400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸುಮಾರು 40 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ಈ ಸ್ಟೇಡಿಯಂಗೆ ಇದೆ. ಪ್ರಧಾನಿ ಮೋದಿ(Narendra Modi) ನಾಡಿದ್ದು ಕ್ರೀಡಾಂಗಣದ ಶಿಲಾನ್ಯಾಸ ಮಾಡಲಿದ್ದಾರೆ. ಇದು ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರಾಣಸಿ(Varanasi) ಸಮೀಪದ ಈ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಷಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ದಿಗ್ಗಜರಾದ ಕಪಿಲ್ ದೇವ್, ಸುನೀಲ್ ಗಾವಸ್ಕರ್, ಸಚಿನ್ ತೆಂಡುಲ್ಕರ್, ಸಮಾರಂಭದಲ್ಲಿ ಹಾಜರಿರಲಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಇತರ ಸದಸ್ಯರಾದ ದಿಲೀಪ್ ವೆಂಗ್ಸರ್ಕಾರ್, ರವಿಶಾಸ್ತ್ರಿ, ಮದನ್ ಲಾಲ್ ಜತೆಗೆ ಕನ್ನಡಿಗ ಜಿಆರ್ ವಿಶ್ವನಾಥ್ ಕೂಡ ಉಪಸ್ಥಿತರಿರಲಿದ್ದಾರೆ. 

ಇದನ್ನೂ ವೀಕ್ಷಿಸಿ:  150 ರೂ. ಇದ್ದ ಟೊಮೆಟೋ ಬೆಲೆ 20 ರೂಪಾಯಿಗೆ ಕುಸಿತ: ಅನ್ನದಾತ ಕಂಗಾಲು