ನೇಪಾಳದಲ್ಲಿ ಭೂಕಂಪ! ಸಿಕ್ಕಿಂನಲ್ಲಿ ಪ್ರವಾಹ? ಜೀವ ಉಳಿಸೋರ ಪ್ರಾಣವೇ ಅಪಾಯದಲ್ಲಿ!

Oct 7, 2023, 2:21 PM IST

ಜಲಾಸುರನ ದಾಳಿಗೆ, ಸಿಕ್ಕಿಂ ತತ್ತರಿಸಿದೆ.ಬಿಟ್ಟೂಬಿಡದ ರಕ್ಕಸ ಮಳೆ.  ಡ್ಯಾಮನ್ನೇ ಛಿದ್ರಗೊಳಿಸೋ ಹಾಗೆ ನುಗ್ಗಿದ ನೀರು. ಆ ನೀರಿನ ಜೊತೆ ಬಂದೊರೋ ಮಣ್ಣು, ಇದೆಲ್ಲವೂ ಕೂಡ ಆ ಜನಕ್ಕೆ ಯಮರೂಪಿಗಳಾಗಿದ್ದಾವೆ. ಅದರ ಒಂದೊಂದು ದೃಷ್ಯ ನೋಡ್ತಿದ್ರೂ ಜೀವ ಝಲ್ ಅನ್ನುತ್ತೆ. ಇದ್ದಕ್ಕಿದ್ದ ಹಾಗೇ ಸಂಭವಿಸಿದ ಮೇಘಸ್ಪೋಟ(Cloudburst), ಇಡೀ ಸಿಕ್ಕಿಂನ ಆಪೋಷನ ತಗೋತಿದೆ. ಎಲ್ಲೆಲ್ಲೂ ನೀರು.. ಎಲ್ಲೆಲ್ಲೂ ಪ್ರವಾಹ.. ಎಲ್ಲೆಲ್ಲೂ ಭೀತಿಯ ವಾತಾವರಣವೇ ಆವರಿಸಿಕೊಂಡಿದೆ. ಸಿಕ್ಕಿಂ(Sikkim) ಇವತ್ತು ನರಕದ ತದ್ರೂಪವಾಗಿ ಬದಲಾಗಿದೆ. ಜಲಾಸುರನ ದಂಡಯಾತ್ರೆಗೆ ಒಳಗಾಗಿರೊ ಸಿಕ್ಕಂ, ಸಮಸ್ಯೆಗಳ ಸುಳಿಯೊಳಗೆ ಅಕ್ಷರಶಃ ಮುಳುಗಿ ಹೋಗಿದೆ. ಈ ಪ್ರವಾಹದಿಂದ(Flood) ಸೇನಾ ಕ್ಯಾಂಪ್ ಧ್ವಂಸವಾಗಿದೆ.. ಸುಮಾರು 23 ಮಂದಿ ಸೈನಿಕರು ನಾಪತ್ತೆಯಾಗಿದಾರೆ. ಅವರ ಪತ್ತೆ ಮಾಡೋ ಕಾರ್ಯ ಸಾಗ್ತಾ ಇದೆ.. ಅದರ ಮಧ್ಯೆ, ನದಿಯಲ್ಲಿ ಕ್ರೇಟ್ಸ್, ಪ್ಕಾಕೇಜಸ್, ಫೈರ್ ಆರ್ಮ್ಸ್ ತೇಲಿಬರ್ತಿರೋದು ವರದಿಯಾಗಿದೆ.ಅಲ್ಲಿನ ಡಿಸಿ ಹಾಗೂ ಆರ್ಮಿ ಅಧಿಕಾರಿಗಳು, ಜನಕ್ಕೇನಾದ್ರೂ ನದಿ ನೀರಲ್ಲಿ ಅಂಥಾ ಎಕ್ಸ್ಪ್ಲೋಸಿವ್ಸ್ ಸಿಕ್ಕಿದ್ರೆ, ನಮ್ ಗಮನಕ್ಕೆ ತನ್ನಿ ಅಂತ ಹೇಳಿದಾರೆ.ಪ್ರವಾಹದಲ್ಲಿ ಬರೀ ನೀರಷ್ಟೇ ಅಲ್ಲ, ಅದರ ಜೊತೆಗೆ ಮಣ್ಣೂ ಸಹ ಬಂದಿರೋದ್ರಿಂದ ಈ ಸ್ಥಿತಿ ನಿರ್ಮಾಣವಾಗಿದೆ.. ನೆಲದಲ್ಲಿದ್ದ ವಾಹನಗಳು ಮಣ್ಣಲ್ಲಿ ಹೂತು ಹೋಗಿವೆ.. ಅಷ್ಟೇ ಅಲ್ಲ, ಗ್ರೌಂಡ್ ಫ್ಲೋರಿನ ಮನೆಗಳು, ಅಂಗಡಿಗಳು ಎಲ್ಲವೂ ಮಣ್ಣಲ್ಲಿ ಮಣ್ಣಾಗಿದಾವೆ.. ಇದನ್ನೆಲ್ಲಾ ಅಗೆದಾದ ಮೇಲೆ ಅದೇನೇನು ಅವಶೇಷಗಳು ಸಿಕ್ತಾವೋ ಗೊತ್ತಿಲ್ಲ.. ಒಟ್ಟಾರೆ, ಈ ಪ್ರಾಂತ್ಯದಲ್ಲಿರೋ ಜನ, ಕರೆಂಟ್ ಇಲ್ಲದೆ, ಕುಡಿಯೋ ನೀರಲ್ಲದೆ, ಜೀವ ಉಳಿಯುತ್ತೆ ಅನ್ನೋ ಭರವಸೆ ಇಲ್ಲದೆ, ಅಂಧಕಾರದಲ್ಲಿ ಮುಳುಗಿದ್ದಾರೆ.

ಇದನ್ನೂ ವೀಕ್ಷಿಸಿ:  ಯುವ ದಸರಾ ಜಗಮಗ: ಮೊದಲ ದಿನದ ಯುವ ಸಂಭ್ರಮ ಹೇಗಿತ್ತು..?