Feb 5, 2024, 4:17 PM IST
ಬಿಬಿಸಿ..ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್. 1922ರಲ್ಲಿ ಬ್ರಿಟಿಷ್ ರಾಜಮನೆತವನವೇ ಬಂಡವಾಳ ಹಾಕಿ ಹುಟ್ಟುಹಾಕಿದ ಕಂಪನಿ ಇದು. ಜಗತ್ತಿನ ಅತಿ ಪುರಾತನ ಮಾಧ್ಯಮ ಸಂಸ್ಥೆ ಅನ್ನಿಸಿಕೊಂಡಿರೋ ಬಿಬಿಸಿಗೆ(BBC) ನೂರು ವರ್ಷಗಳ ಇತಿಹಾಸವಿದೆ. ಆದ್ರೆ ಇಂಥ ವಾಹಿನಿಗೆ ಭಾರತ(India) ಅಂದ್ರೆ ಅದೇನೋ ಸಹಿಸಲಾಗದ ಬೇನೆ ಶುರುವಾಗುತ್ತೆ. ಈ ಹಿಂದೆ ಭಾರತವನ್ನ , ಪ್ರಧಾನಿ ಮೋದಿಯವರನ್ನ ನಿಷೇಧಿತ ಡಾಕ್ಯುಮೆಂಟರಿ ಮೂಲಕ ತೆಗಳೋಕೆ ನೋಡಿದ್ದ ಬಿಬಿಸಿ ಈಗ ರಾಮ ಮಂದಿರದ(Ram Mandir) ವಿಚಾರಕ್ಕೆ ಅವರದೇ ದೇಶದವರಿಂದ ತಪರಾಕಿ ತಿಂತಿದೆ. ಅಯೋಧ್ಯಾ(BBC) ರಾಮ ಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕಂಡು ಸಮಸ್ತ ಆಸ್ತಿಕ ಹಿಂದೂ ಸಮಾಜ ಖುಷಿಯಿಂದ ಕಣ್ಣೀರಿಟ್ಟಿದೆ. ಶತಮಾನಗಳ ಹೋರಾಟಕ್ಕೆ ಸಿಕ್ಕ ಜಯ ಕಂಡು ಸಹಜವಾಗಿಯೇ ಹೃದಯ ತುಂಬಿ ಬಂದಿದೆ. ಭಾರತದಲ್ಲಿ ಮಾತ್ರವಲ್ಲ. ವಿಶ್ವದ ಮೂಲೆ ಮೂಲೆಯಲ್ಲಿರೋ ರಾಮ ಭಕ್ತರು ಅಯೋಧ್ಯಾ ಮಂದಿರದ ಲೋಕಾರ್ಪಣೆಯನ್ನ ಕಣ್ತುಂಬಿಕೊಂಡು ರಾಮಧ್ಯಾನ ಮಾಡಿದ್ದಾರೆ. ಆದ್ರೆ ಜಗತ್ತಿನ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಒಂದಾದ, ಭಾರತ , ಮೋದಿ, ಹಿಂದೂಗಳು ಅಂದ್ರೆ ಹಲ್ಲು ಕಡಿಯುವ ಬಿಬಿಸಿ ಮಾತ್ರ, ತನ್ನ ವರದಿಯಲ್ಲಿ ಉದ್ಧಟತನ ತೋರಿಸಿತ್ತು. ಸತ್ಯವನ್ನ ಮುಚ್ಚಿಟ್ಟು ಅರೆಬೆಂದ ಕಥೆಯನ್ನ ಹೇಳಿತ್ತು. ರಾಮ ಮಂದಿರ ನಿರ್ಮಾಣವಾಗಿರೋದು ಧ್ವಂಸವಾದ ಮಸೀದಿ ಮೇಲೆ ಅನ್ನೋದನ್ನ ಹೇಳಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗಿದ್ದು ಹೇಗೆ ಅನ್ನೋದನ್ನ ಹೇಳದೇ ಕೂತು ಬಿಟ್ಟಿತ್ತು.
ಇದನ್ನೂ ವೀಕ್ಷಿಸಿ: DK Suresh: ಅಂಕಿ ಅಂಶಗಳೊಂದಿಗೆ ಹಸ್ತಪಡೆ ‘ಸಿದ್ದ’..! ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿತಾ ಬಿಜೆಪಿ..?