Oct 24, 2023, 1:06 PM IST
ದೀಪಾವಳಿಗೆ ಇನ್ನೂ ಎರಡು ವಾರ ಇರುವಾಗಲೇ, ನವದೆಹಲಿಯಲ್ಲಿ ವಾಯುಮಾಲಿನ್ಯ(air pollution) ಶುರುವಾಗಿದೆ. ವಾಯುಗುಣಮಟ್ಟ ಅತ್ಯಂತ ಕಳಪೆಯಾಗಿದೆ.ಇಲ್ಲಿ ನವೆಂಬರ್‌ನಿಂದ ಫೆಬ್ರವರಿವರೆಗೆ ವಾಯು ಗುಣಮಟ್ಟ ಕುಸಿತವಾಗಲಿದೆ. ಈ ಸಲ ಅಕ್ಟೋಬರ್‌ನಲ್ಲೇ ತೀವ್ರ ವಾಯುಮಾಲಿನ್ಯವಾಗಿದೆ. ಜನರ ಆರೋಗ್ಯದ(Health) ಮೇಲೂ ಗಂಭೀರ ಪರಿಣಾಮಬೀರಲಿದೆ. ಸೋಮವಾರ ಬೆಳಗ್ಗೆ 303 AQI ದಾಖಲಾಗಿದೆ. ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಕಳಪೆಯಿದ್ದು, ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ(delhi) ಸರ್ಕಾರ ಕಠಿಣ ಕ್ರಮಕೈಗೊಳ್ಳಲು ಸೂಚಿಸಿದೆ. ಧೀರ್‌ಪುರ - 352 AQI, ದೆಹಲಿ ವಿಶ್ವವಿದ್ಯಾಲಯ - 330 AQI, ನೋಯ್ಡಾ - 308 AQI, ಲೋಧಿ ರಸ್ತೆ - 303 AQI, ಏರ್‌ಪೋರ್ಟ್ - 323 AQI, IIT ದೆಹಲಿ - 309 AQI ವಾಯುಮಾಲಿನ್ಯವಿದೆ.
ಇದನ್ನೂ ವೀಕ್ಷಿಸಿ: ದಸರಾ ಬಳಿಕ ಘೋಷಣೆಯಾಗುತ್ತಾ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು? ಈ ಮಹಿಳಾ ನಾಯಕಿಗೆ ಸಾರಥ್ಯದ ಹೊಣೆ?