ಯುಪಿ ಸಾಮ್ರಾಜ್ಯಕ್ಕೆ ಮತ್ತೆ ಯೋಗಿ ಸಾರಥ್ಯ; ಯೋಗಿ ದಾಖಲೆಯ 7 ಕಥೆಗಳು

Mar 26, 2022, 12:49 PM IST

ಲಕ್ನೋ(ಮಾ.26):  ಯೋಗಿ ಆದಿತ್ಯನಾಥ್ ಇಂದು ಉತ್ತರ ಪ್ರದೇಶ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ತನ್ನ ಅಧಿಪತ್ಯ ಮುಂದುವರೆಸಿದೆ. ಮುಂದಿನ ಐದು ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಖದರ್.  

ಯೋಗಿ ಆಧಿತ್ಯನಾಥ್ ಉತ್ತರ ಪ್ರದೇಶ್ ಎರಡನೇ ಬಾರಿ ಸಿಎಂ ಆಗೋದರ ಮೂಲಕ, ಅಲ್ಲಿನ ರಾಜಕೀಯ ರಂಗದಲ್ಲಿ ಅನೇಕ ದಾಖಲೆನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆನೇ ಈ ಹಿಂದೆ ಯುಪಿ ರಾಜಕೀಯ ಇತಿಹಾಸ ಹೊಂದಿದೆ ದಾಖಲೆಗಳನ್ನು ಇಂದು ಎರಡನೇ ಬಾರಿ ಸಿಎಂ ಆಗಿ ಪ್ರಮಾಣ ಸ್ವೀಕರಿಸೋ ಮೂಲಕ ಪುಡಿ ಪುಡಿ ಮಾಡಿದ್ದಾರೆ ಯೋಗಿ ಆಧಿತ್ಯನಾಥ್.