ಕಂತೆ ಕಂತೆ ದುಡ್ಡೆಲ್ಲಾ ಯಾರ ಸ್ವತ್ತು..? ಹೇಗೆ ಬಂತು..? ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಧೀರಜ್ ಸಾಹು..?

Dec 18, 2023, 2:27 PM IST


ದುಡ್ಡು..ದುಡ್ಡು..ದುಡ್ಡು..ಎಲ್ಲಿ ನೋಡಿದ್ರೂ ರಾಶಿ ರಾಶಿ ನೋಟು. ಆ ನೋಟಿನ ಕಂತೆ  ಎಣಿಸೋಕಾಗದೆ ಮಿಷಿನ್‌ನೇ ಕೆಟ್ಟೋಯ್ತು. ಕಾಸಿನ ಕೋಟೆ ನೋಡಿ ಅಧಿಕಾರಿಗಳೇ ಸುಸ್ತಾದ್ರು. ನೋಡಿದೋರಿಗೆಲ್ಲಾ ಇದು ಸಂಸದನ ಮನೆ ಅಲ್ಲ. ನೋಟಿನ ಕೋಟೆ ಅನ್ನೋದು ಮನವರಿಕೆಯಾಯ್ತು. ಧೀರಜ್ ಸಾಹು ಒಡಿಶಾದ ಕಾಂಗ್ರೆಸ್ ಸಂಸದ(Congress MP). ಅಕ್ರಮ ಆಸ್ತಿಗಳಿಕೆ(Illegal property acquisition) ಅನುಮಾನದ ಮೇಲೆ ಐಟಿ ಪಡೆ ಸಾಹುಗೆ ಸಂಬಂಧಪಟ್ಟ ಹತ್ತಾರು ಕಡೆ ದಾಳಿ ನಡೆಸಿತ್ತು. ದಾಳಿ ನಡೀವಾಗ ಇಂಥದ್ದೊಂದು ಆಘಾತಕಾರಿ, ಅಚ್ಚರಿ ಬೇಟೆ ನಡೆಯಲಿದೆ ಅನ್ನೋದು ಆ ಅಧಿಕಾರಿಗಳಿಗೂ ಗೊತ್ತಿರ್ಲಿಲ್ವೋ ಏನೋ. ಆದ್ರೆ, ಧೀರಜ್ ಸಾಹು(Dheeraj Sahu) ಹಾಗೂ ಅವರ ಆಪ್ತರ ಮನೆಗಳ ಮೇಲೆ ರೈಡ್ ನಡೆದಾಗ, ನೋಟಿನ ದೇವತೆ ಅವರ ಮನೆಗಳಲ್ಲಿ ತಾಂಡವ ಆಡ್ತಾ ಇದ್ಲು. ಈ ದಾಳಿಲಿ ಸಿಕ್ಕಿರೋ ನೋಟಿನ ಬೆಲೆ ಎಷ್ಟು ಅನ್ನೋದನ್ನ ಲೆಕ್ಕಾ ಹಾಕೋಕೆ, ಒಂದಲ್ಲಾ ಎರಡಲ್ಲಾ, ಬರೋಬ್ಬರಿ ಒಂದು ಡಜನ್ ನೋಟು ಎಣಿಸೋ ಮಿಷಿನ್‌ಗಳನ್ನ ತರಸ್ಕೊಂಡಿದ್ರು. ಭುವನೇಶ್ವರದಿಂದ ಮಿಷಿನ್ ತರುಸ್ಕೊಂಡು ನೋಟು ಎಣಿಸಿದ್ರು ಅಧಿಕಾರಿಗಳು. ಒಂದಲ್ಲಾ ಎರಡಲ್ಲಾ, ಹೆಚ್ಚೂಕಮ್ಮಿ ಒಂದು ವಾರಗಳ ಕಾಲ ನಡೆದ ರೈಡ್ ಇದು. ಒಡಿಶಾ, ಜಾರ್ಖಂಡ್, ದೆಹಲಿ, ಈ ಮೂರೂ ರಾಜ್ಯಗಳಲ್ಲಿ, ಧಿರಜ್ ಸಾಹು ನಿಗೂಢ ವ್ಯವಹಾರ ನಡೆಸಿದ್ರು ಅನ್ನೋ ಮಾಹಿತಿ ಇದೆ. ಅದರ ಆಧಾರದ ಮೇಲೇ ಹೆಚ್ಚುಕಮ್ಮಿ ಒಂದು ಡಜನ್ ಜಾಗಗಳಲ್ಲಿ ಶೋಧ ಕಾರ್ಯ ನಡೀದಿತ್ತು. ಈ ಪರಿ ಲೆಕ್ಕಕ್ಕೆ ಸಿಗದ ದುಡ್ಡು ಪತ್ತೆಯಾಗಿರೋದು, ಕಾಂಗ್ರೆಸ್  ಸಂಸದರ ಮನೆಯಲ್ಲಿ.

ಇದನ್ನೂ ವೀಕ್ಷಿಸಿ:  ನ್ಯೂ ಇಯರ್ ಗುಂಗಿನಲ್ಲಿದ್ದವರಿಗೆ ಲಗಾಮು: ಹೊಸ ವರ್ಷಕ್ಕೆ ಪಾಲಿಕೆ, ಪೊಲೀಸ್ ಇಲಾಖೆ ಗೈಡ್‌ಲೈನ್ಸ್ ರೆಡಿ !