India@75: ಬಹುರಾಷ್ಟ್ರೀಯ ಕಂಪನಿ ಕಟ್ಟಿ ಭಾರತೀಯರ ಬಗ್ಗೆ ಹೊಸ ಭರವಸೆ ಮೂಡಿಸಿದ JRD ಟಾಟಾ

Jul 27, 2022, 10:44 AM IST

1932, ಅಕ್ಟೋಬರ್ 15, ಕರಾಚಿಯಿಂದ ಮದ್ರಾಸ್‌ಗೆ ಲಘು ವಿಮಾನವೊಂದು ಹಾರಿ ಬಂತು. ಮೊದಲ ಬಾರಿಗೆ ಭಾರತೀಯನೊಬ್ಬ ವಿಮಾನ ಚಲಾಯಿಸಿದ್ದು ಅದರ ವಿಶೇಷ. ಅಂತಹ ಕೌಶಲ್ಯಗಳೆನಿದ್ದರೂ ಬ್ರಿಟಿಷರದ್ದು ಎಂಬ ನಂಬಿಕೆಯನ್ನು 28 ವರ್ಷದ ತರುಣ ಸುಳ್ಳು ಮಾಡಿದ. ಆತನೇ ಜಹಂಗೀರ್ ರತನ್‌ಜೀ ದಾದಾಭಾಯ್ ಟಾಟಾ ಅಥವಾ ಜೆಆರ್‌ಡಿ ಟಾಟಾ.

ಟಾಟಾ ಗ್ರೂಪ್‌ನ ಮುಂದಾಳತ್ವ ವಹಿಸಿದ್ದ ಉದ್ಯಮಿ. ಲಂಡನ್ ಹಾಗೂ ಫ್ರಾನ್ಸ್‌ನಲ್ಲಿ ವಿದ್ಯಾಭ್ಯಾಸ ಮುಗಿಸುತ್ತಾರೆ. ನಂತರ ಫ್ರೆಂಚ್ ಸೈನ್ಯಕ್ಕೆ ಸೇರಿ 1 ವರ್ಷ ಸೇವೆ ಸಲ್ಲಿಸುತ್ತಾರೆ. ತಂದೆಯ ಅಣತಿಯಂತೆ ಭಾರತಕ್ಕೆ ಮರಳುತ್ತಾರೆ. ಇಲ್ಲಿ ಮೊದಲ ಬಾರಿಗೆ ವಿಮಾನ ಹಾರಿಸುತ್ತಾರೆ. ಆ ನಂತರ ಟಾಟಾ ಏವಿಯೇಷನ್ ಶುರು ಮಾಡುತ್ತಾರೆ. ಟಾಟಾ ಏವಿಯೇಷನ್ ಭಾರತದ ಹೆಮ್ಮೆಯಾಗುತ್ತದೆ.