ರಂಜಾನ್ ಸ್ಪೆಷಲ್‌, ಆಹಾರ ಪ್ರಿಯರ ಸ್ವರ್ಗವಾದ ಫ್ರೇಜರ್ ಟೌನ್‌ನ ಫುಡ್ ಸ್ಟ್ರೀಟ್

ರಂಜಾನ್ ಸ್ಪೆಷಲ್‌, ಆಹಾರ ಪ್ರಿಯರ ಸ್ವರ್ಗವಾದ ಫ್ರೇಜರ್ ಟೌನ್‌ನ ಫುಡ್ ಸ್ಟ್ರೀಟ್

Published : Apr 07, 2023, 03:45 PM ISTUpdated : Apr 07, 2023, 03:48 PM IST

ಬೆಂಗಳೂರಿನ ಫ್ರೇಜರ್ ಟೌನ್‌ನ ಮಸೀದಿ ರಸ್ತೆ ಸದ್ಯದ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ. ರಂಜಾನ್ ಪ್ರಯುಕ್ತ ನಾನಾ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದ್ದು, ಫುಡ್ಡೀಗಳಂತೂ ಫುಲ್ ಖುಷಿಯಾಗಿದ್ದಾರೆ.

ರಂಜಾನ್ ಹಿನ್ನೆಲೆ ಫ್ರೇಜರ್ ಟೌನ್‌ನ ಪ್ರತಿಷ್ಠಿತ ಫುಡ್ ಸ್ಟ್ರೀಟ್ ಮಸೀದಿ ರಸ್ತೆ ಆಹಾರ ಪ್ರಿಯರ ಸ್ವರ್ಗವಾಗಿದೆ.. ಫ್ರೇಜರ್ ಟೌನ್‌ಗೆ ಕಾಲಿಟ್ಟ ತಕ್ಷಣ ಮಸಾಲೆಗಳ ಸುವಾಸನೆ ಮತ್ತು ಗ್ರಿಲ್‌ಗಳಿಂದ ಹೊಗೆಯಾಡುವ ದೃಶ್ಯಗಳು ಫುಡ್ಡೀಗಳನ್ನು ಸ್ವಾಗತಿಸುತ್ತಿವೆ. ರಸ್ತೆಯ ಎರಡು ಬದಿಗಳ ಅಂಗಡಿಗಳಲ್ಲಿ ವಿಭಿನ್ನ ರೀತಿಯ ವೆಜ್ ಹಾಗೂ ನಾನ್ ವೆಜ್ ಭಕ್ಷ್ಯಗಳ ಸಾಲು ಬಾಯಲ್ಲಿ ನೀರು ತರಿಸುತ್ತದೆ. ಬಿಸಿ ಬಿಸಿಯಾದ ಮಟನ್ ಕೀಮಾ ವಿವಿಧ ಬಗೆಯ ಸಮೋಸಾಗಳು, ಸುವಾಸನೆಯ ಬಿರಿಯಾನಿ, ರುಚಿಕರವಾದ ಕೇಕ್‌ಗಳು ಮತ್ತು ರಸಭರಿತವಾದ ಸ್ಟೀಕ್ಸ್  ಇವೆಲ್ಲವೂ ಸೇರಿ ಬೆಂಗಳೂರಿನ ಫ್ರೇಜರ್ ಟೌನ್‌ನ ಮಸೀದಿ ರಸ್ತೆ ಸದ್ಯದ ಆಹಾರ ಪ್ರಿಯರ ಹಾಟ್ ಸ್ಪಾರ್ಟ್ ಆಗಿದೆ.

ಬಿರಿಯಾನಿ, ಹಲೀಮ್ ಮತ್ತು ಇತರ ಹಬ್ಬದ ಭಕ್ಷ್ಯಗಳನ್ನು ರಂಜಾನ್‌ ಗಾಗಿ ಸಿದ್ಧಪಡಿಸಲಾಗಿದೆ. ಸಾಲು ಸಾಲು ಅಂಗಡಿಗಳಲ್ಲಿ ಕೆಂಡದ ಮೇಲೆ ಸುಡುವ ತಂದೂರಿ ಆಹಾರವನ್ನು (Food) ಸಾರ್ವಜನಿಕರು ಸಾಲು ಗಟ್ಟಿ ನಿಂತು ಸವಿಯುವ ದೃಶ್ಯ ಸರ್ವೆ ಸಮಾನ್ಯವಾಗಿದೆ. ಬೇಸಿಗೆ ಬಿಸಿ ತಣಿಸಲು ರುಚಿಕರ ಪಾನೀಯಗಳು, ವಿಶೇಷ ರುಚಿಯ (Taste) ಸಿಹಿ ತಿನಿಸಿಗಳು ಸಹ ಈ ಫುಡ್ ಸ್ಟ್ರೀಟ್ ನ ಹೈಲೆಟ್ಸ್ ಆಗಿದೆ.

ರಂಜಾನ್ ಉಪವಾಸ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

23:3220 ವರ್ಷಗಳಿಂದ ಗಿಳಿಗಳಿಗೆ ಅನ್ನ ನೀಡುತ್ತಿರುವ ಪುಣ್ಯವಂತ!
19:35Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!
17:41Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:59ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ
01:13Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
02:18ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ
04:02Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ
03:11ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ
04:10‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ
Read more