ಗುರು ಪೂರ್ಣಿಮೆ ಮಹತ್ವ ಏನು? ಹರೀಶ್ ಕಶ್ಯಪ್ ವಿವರಿಸುತ್ತಾರೆ ಕೇಳಿ..

Jul 13, 2022, 4:51 PM IST

ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೇ ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮಃ
ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯ ಈ ದಿನ ಬಹಳ ವಿಶೇಷ. ಆಷಾಢ ಮಾಸದ ಪೂರ್ಣಿಮೆಯಂದು ವೇದವ್ಯಾಸರು ಜನಿಸಿದ ದಿನ. ಹಾಗಾಗಿ, ವೇದ, ಶಾಸ್ತ್ರ, ಜ್ಞಾನ, ವಿಜ್ಞಾನದ ತವನಿಧಿಯಾದ ವೇದವ್ಯಾಸರು ಜನಿಸಿದ ಈ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತೇವೆ.

ಪೂರ್ಣಿಮೆಯಂದು ಇದನ್ನು ಆಚರಿಸುವುದರ ಹಿಂದೆ ಬಹಳಷ್ಟು ವಿಶೇಷತೆಗಳಿವೆ. ಈ ದಿನದ ಮಹತ್ವವೇನು? ಹೇಗೆ ಆಚರಿಸಬೇಕು? ಎಲ್ಲವನ್ನೂ ವಿವರವಾಗಿ ಆಧ್ಯಾತ್ಮಿಕ ಚಿಂತಕರೂ, ಜ್ಯೋತಿಷಿಗಳೂ ಆದ ಹರೀಶ್ ಕಶ್ಯಪ್ ವಿವರಿಸಿದ್ದಾರೆ ಕೇಳಿ.