ಪ್ರಯಾಗ್‌ರಾಜ್‌: ಮಹಾಕುಂಭಮೇಳದ ವಿಶೇಷತೆ ಏನು: ರೋಚಕ ಇತಿಹಾಸ ಗೊತ್ತಾ?

Jan 14, 2025, 11:15 AM IST

ಬೆಂಗಳೂರು(ಜ.14): ಪಾಪವಿಮೋಚನೆ.. ಪುಣ್ಯಪ್ರಾಪ್ತಿಯನ್ನು ಕರುಣಿಸುವ ಮಹಾ ಕುಂಭಕ್ಕೆ ಮೇಳಕ್ಕೆ ಚಾಲನೆ ಸಿಕ್ಕಾಗಿದೆ. ಈ ಮಹಾಕುಂಭಮೇಳಕ್ಕೆ ಸುಮಾರು 40 ಕೋಟಿ ಭಕ್ತರು ಆಗಮನ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಕುಂಭಮೇಳದ ವಿಶೇಷತೆ ಏನು? ಹಿಂದೂಗಳಿಗೆ ಇದು ಪವಿತ್ರವೇಕೆ? ಅನ್ನೋದರ ಕುರಿತು ನೋಡೋದೇ ಈ ಕ್ಷಣದ ವಿಶೇಷ ಮಹಾಕುಂಭ ವೈಭವ. 

ಜಗತ್ತಿನ ಅತೀ ದೊಡ್ಡ ಧಾರ್ಮಿಕ ಉತ್ಸವ ಎಂದೇ ಕರೆಯಲ್ಪಡುವ ಮಹಾ ಕುಂಭಮೇಳ ಆರಂಭವಾಗಿದೆ. 45 ದಿನಗಳ ಕಾಲ ನಡೆಯಲು ಈ ಮಹಾಕುಂಭಮೇಳದಲ್ಲಿ ಸುಮಾರು 40 ಕೋಟಿ ಭಕ್ತರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪುಷ್ಯ ಹುಣ್ಣಿಮೆಯ ಪವಿತ್ರ ದಿನವಾದ ಇಂದು ಮಹಾಕುಂಭಮೇಳಕ್ಕೆ ಚಾಲನೆ ದೊರೆತಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಈ ಉತ್ಸವದ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ. 

Suvarna Special: ಕನಕಾಧಿಪತಿಯ ಸಿಂಹಾಸನ ಕನಸಿಗೆ ಜಾತಿ ಮಹಾಶಕ್ತಿ!

ಯೆಸ್, ಇದಿಷ್ಟು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ  ಮಹಾ ಕುಂಭಮೇಳದ ಮಹತ್ವದ ವಿಚಾರಗಳು. ಹಾಗೆನೇ ಈ ಕುಂಭಮೇಳ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವುದರಿಂದ ಕೆಲವು ವಿಶೇಷತೆಗಳನ್ನು ಹೊಂದಿದೆ. 
2025ರ ಮಹಾಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ ಈ ಮೂರು ಕ್ಷೇತ್ರಗಳಿಗಿಂತ ಪ್ರಯಾಗ್‌ರಾಜ್‌ ಅತ್ಯಂತ ಪವಿತ್ರ ಕ್ಷೇತ್ರ. ಪ್ರಯಾಗ್‌ರಾಜ್‌ನ ಮಹತ್ವ ಕುರಿತು ಆ ಸ್ಥಳ ಮಹಿಮೆ ಕುರಿತು ನೀವು ತಿಳಿದುಕೊಳ್ಳಲೇಬೇಕು. 

ಯೆಸ್, ಕುಂಭಮೇಳವೆಂದ್ರೆ ಏನು? ಇದು ಹುಟ್ಟಿಕೊಂಡಿದ್ದು ಹೇಗೆ? ಈ ಮಹಾ ಕುಂಭಮೇಳ 12 ವರ್ಷಗಳಿಗೊಮ್ಮೆ ಏಕೆ ಬರುತ್ತೆ? ಇಲ್ಲಿ ಸ್ನಾನ ಮಾಡುವುದರಿಂದ ಆಗುಲ ಲಾಭವೇನು ಅನ್ನೋದನ್ನು ನೋಡಿದ್ದಾಯ್ತು. ಈಗ ನಡೆಯುತ್ತಿರು ಕುಂಭಮೇಳದಲ್ಲಿ ಏನೆಲ್ಲ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ. 

ಸಧ್ಯ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಹೇಗೆಲ್ಲ ತಯಾರಿ ಮಾಡಿಕೊಂಡಿದೆ? ಏನೆಲ್ಲ ಭದ್ರತೆ ಮಾಡಿಕೊಂಡಿದೆ ಮತ್ತು ಕುಂಭಮೇಳದಲ್ಲಿ ಭಾಗಿಯಾಗುವ ಭಕ್ತರಿಗೆ ಏನೆಲ್ಲ ಅನುಕೂಲಗಳನ್ನು ಮಾಡಲಾಗಿದೆ ಅನ್ನೋದರ ಕುರಿತು ಇಲ್ಲಿ ನೋಡೋಣ.