ವಿಜಯಪುರ ಸಿದ್ದರಾಮೇಶ್ವರ ಜಾತ್ರೆ: ಕಂಕಣ ಭಾಗ್ಯ ಕರುಣಿಸುವ ನಂದಿಕೋಲು

Jan 23, 2023, 4:26 PM IST

ಶತಮಾನ ಕಂಡಿರುವ ವಿಜಯಪುರ ಸಿದ್ದರಾಮೇಶ್ವರ ಜಾತ್ರೆ ಸಂಕ್ರಾಂತಿ ಸಮಯದಲ್ಲಿ 5 ದಿನಗಳ ಕಾಲ ನಡೆಯುತ್ತೆ. ಈ ಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯೇ 7 ನಂದಿಕೋಲುಗಳು. 5 ದಿನಗಳ ಕಾಲ ಪೂಜೆಗೊಂಡು ನಗರದಾದ್ಯಂತ ಭಕ್ತರಿಗೆ ದರ್ಶನ ಕೊಡುತ್ವೆ ಈ ನಂದಿಕೋಲುಗಳು. ಇನ್ನೊಂದು ವಿಶೇಷ ಏನಂದ್ರೆ ಹೀಗೆ ಸಿದ್ದರಾಮೇಶ್ವರ ಜಾತ್ರೆಯಲ್ಲಿ ದರ್ಶನ ಕೊಡುವ ನಂದಿಕೋಲುಗಳು ಕಂಕಣ ಭಾಗ್ಯವನ್ನು ಕರುಣಿಸುತ್ತವೆ ಅನ್ನೋದು. ಮನೆಯಲ್ಲಿ ಬೇಗ ಮಕ್ಕಳ ಮದುವೆಯಾಗದೆ ಇದ್ರೆ, ವಯಸ್ಸು ದಾಟಿದ್ದು ಕಂಕಣ ಭಾಗ್ಯ ಕೂಡಿ ಬರದೆ ಇದ್ರೆ, ಸಿದ್ದರಾಮೇಶ್ವರನಿಗೆ ಬೇಡಿಕೊಂಡು ನಂದಿಕೋಲುಗಳಿಗೆ ಭಕ್ತರು ಮದುವೆ ಬಾಸಿಂಗಗಳನ್ನ ಕಟ್ಟುತ್ತಾರೆ. ಹೀಗೆ ಬಾಸಿಂಗ ಕಟ್ಟಿದ ಒಂದು ವರ್ಷದಲ್ಲಿ ಅಂದ್ರೆ ಮುಂದಿನ ಜಾತ್ರೆ ಹೊತ್ತಿಗೆ ಕಂಕಣ ಭಾಗ್ಯ ಕೂಡಿ ಬಂದು ಮದುವೆ ನಡೆಯುತ್ತೆ ಎನ್ನುವ ನಂಬಿಕೆ ಇದೆ. ಹೀಗೆ ಬೇಡಿಕೆ ಇಡೇರಿದ ಮೇಲು ಭಕ್ತರು ಮದುವೆಯಲ್ಲಿ ಕಟ್ಟಿದ ಬಾಸಿಂಗವನ್ನ ತಂದು ನಂದಿಕೋಲುಗಳಿಗೆ ಮುಟ್ಟಿಸಿ ಹರಕೆ ತಿರಿಸೋದು ಇದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.

Panchang: ವಾಸವಾಂಬಾ ಅಗ್ನಿ ಪ್ರವೇಶಿಸಿದ ದಿನ, ಆಕೆಯನ್ನು ಆರಾಧಿಸಿ