Jan 2, 2023, 2:32 PM IST
ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ವೈಕುಂಠ ಏಕಾದಶಿಯ ಶುಭ ಸಂದರ್ಭವನ್ನು ಆಚರಿಸಲಾಗುತ್ತದೆ. ರಾಜ್ಯಾದ್ಯಂತ ವೆಂಕಟೇಶ್ವರನಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಲಾಗುತ್ತದೆ. ಅದೇ ರೀತಿ ವೈಯ್ಯಾಲಿಕಾವಲ್ ಟಿಟಿಡಿಯಲ್ಲಿ ಏಕಾದಶಿ ಸಡಗರ ಕಳೆಗಟ್ಟಿದೆ. ಬೆಳಗಿನ ಜಾವ 3 ಗಂಟೆಯಿಂದಲೇ ತಿಮ್ಮಪ್ಪನಿಗೆ ವಿಶೇಷ ಪೂಜೆ ನಡೆದಿದೆ. ಸನ್ನಿಧಾನಕ್ಕೆ 1ಲಕ್ಷಕ್ಕೂ ಹೆಚ್ಚಿನ ಭಕ್ತರ ಆಗಮನ ನಿರೀಕ್ಷೆ ಇದ್ದು, ರಾತ್ರಿ 12 ಗಂಟೆಯವರೆಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಲಡ್ಡು ವಿತರಣೆ ಮಾಡಲಾಗುತ್ತದೆ.