310 ಕೋಟಿ ಆದಾಯ ಬಂದರೂ ಅಯ್ಯಪ್ಪನ ಸನ್ನಿಧಿ ಅವ್ಯವಸ್ಥೆ ಆಗರ: ಶಬರಿಮಲೆಯಲ್ಲಿ ನೂಕುನುಗ್ಗಲು, ಪ್ರತಿಭಟನೆ

Dec 15, 2023, 9:25 AM IST

ಕೇರಳ ಸರ್ಕಾರಕ್ಕೆ ಶಬರಿಮಲೆಯಿಂದ (Sabarimala) ಸುಮಾರು 310 ಕೋಟಿ ರೂಪಾಯಿ ಆದಾಯ ಬರುತ್ತದೆ. ಆದರೂ ಕೂಡ ಅಲ್ಲಿ ಯಾವುದೇ ಮೂಲ ಸೌಕರ್ಯಗಳು(Basic Facilities) ಮಾತ್ರ ಇಲ್ಲ. ಅಭಿವೃದ್ಧಿ ಶೂನ್ಯವಾಗಿದ್ದು, ರಸ್ತೆ, ಬಸ್‌, ಶೌಚಾಲಯ ವ್ಯವಸ್ಥೆಯಂತೂ ಇಲ್ವೇ ಇಲ್ಲ. ಇದಕ್ಕೆ ಅಯ್ಯಪ್ಪ ಸ್ವಾಮಿ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 18 ಗಂಟೆ ಕಾದರೂ ಅಯ್ಯಪ್ಪ ಸ್ವಾಮಿ(Ayyappa Swami) ದರ್ಶನ ಮಾತ್ರ ಭಕ್ತರಿಗೆ ಸಿಗುತ್ತಿಲ್ಲ. ಅಲ್ಲದೇ ಕುಡಿಯಲು ನೀರಿಲ್ಲದೇ, ಉಳಿದುಕೊಳ್ಳಲು ನೆರಳಿಲ್ಲದೇ ಅಲ್ಲಿ ಭಕ್ತರು ಪರದಾಡುತ್ತಿದ್ದಾರೆ. ಸುಮಾರು 8 ಕಿ.ಲೋ ಮೀಟರ್‌ ವರೆಗೆ ಕ್ಯೂನಲ್ಲಿ ಭಕ್ತರು ನಿಂತಿದ್ದಾರೆ. ಭಕ್ತರ ನಿರ್ವಹಣೆ, ಭಕ್ತರ ವಾಹನಗಳ ನಿರ್ವಹಣೆಯಲ್ಲಿ ಟ್ರಾವಂಕೂರು ದೇವಸ್ಥಾನ ಮಂಡಳಿ(Travancore Temple Board) ಮತ್ತು ಪೊಲೀಸರು ಪೂರ್ಣ ವಿಫಲರಾಗಿದ್ದಾರೆ. ಇದರ ಪರಿಣಾಮ ಭಕ್ತರು ಕೇರಳ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲ.. ಈಶ್ವರನ ಪ್ರಾರ್ಥನೆ ಮಾಡಿ