ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಪೂರ್ಣ ಫಲ ಸಿದ್ಧಿ

Aug 3, 2022, 4:56 PM IST

ಶ್ರಾವಣ ಶುಕ್ಲ ಪಕ್ಷದಲ್ಲಿ ಮೊದಲ ಶುಕ್ರವಾರ, ಅಥವಾ ಹುಣ್ಣಿಮೆಯ ಮೊದಲಿನ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 5ರಂದು ವರಮಹಾಲಕ್ಷ್ಮೀ ಹಬ್ಬ.  ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವ್ರತವನ್ನು ಆಚರಿಸುವದರಿಂದ ತಾಯಿ ಮಹಾಲಕ್ಷ್ಮೀ ಕೇಳಿದ್ದೆಲ್ಲ ಕೊಡುತ್ತಾಳೆ ಎಂಬ ನಂಬಿಕೆ ಇದೆ. 

ಜಾತಕದಲ್ಲಿ ಧನಬಲವಿಲ್ಲದವರಿಗೆ ಪರಿಹಾರ ಕೊಡುವ ವರಮಹಾಲಕ್ಷ್ಮೀ..!

ಇಷ್ಟಕ್ಕೂ ಈ ವ್ರತ ಆಚರಿಸುವ ಸರಿಯಾದ ವಿಧಾನವೇನು, ಹಬ್ಬದ ಮಹತ್ವವೇನು, ಮಹಾಲಕ್ಷ್ಮೀ ಅನುಗ್ರಹ ಪಡೆಯಲು ಜ್ಯೋತಿಷ್ಯ ನಿರ್ದೇಶನಗಳೇನು ಎಲ್ಲವನ್ನೂ ಡಾ. ಹರೀಶ್ ಕಶ್ಯಪ್ ತಿಳಿಸಿಕೊಟ್ಟಿದ್ದಾರೆ..