ರಾಘವೇಂದ್ರ ಸ್ವಾಮಿ ಅಂತಿಮ ಗುರುವಾದದ್ದು ಹೇಗೆ? ಆರಾಧನಾ ಮಹೋತ್ಸವದ ಮಹತ್ವವೇನು?

Aug 12, 2022, 4:39 PM IST

ಆಗಸ್ಟ್ 12ರಿಂದ 14ರವರೆಗೆ ಶ್ರೀಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ‌‌. ಮಂತ್ರಾಲಯದ ವೃಂದಾವನದಲ್ಲಿ ನೆಲೆಸಿರುವ ರಾಯರು 700 ವರ್ಷ ಕಾಲ ಅಲ್ಲಿರುತ್ತಾರೆ ಅನ್ನೋ ಪ್ರತೀತಿಯಿದೆ. ಅವರು ಸಜೀವ ವೃಂದಾವನಸ್ಥರಾದ ದಿನವನ್ನು ಆರಾಧನಾ ಮಹೋತ್ಸವವಾಗಿ ಪ್ರತಿ ವರ್ಷ ಮಂತ್ರಾಲಯ ‌ಮಠದಲ್ಲಿ ಆಚರಿಸಲಾಗುತ್ತದೆ. ಈ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಗಳಿಂದ ಭಕ್ತರು ಮಂತ್ರಾಲಯ ಮಠಕ್ಕೆ ಆಗಮಿಸುತ್ತಾರೆ. 

ಮಂತ್ರಾಲಯ ಮಠ ಗುರುತೇ ಸಿಗದಷ್ಟು ಬದಲು; ಮನ ಸೆಳೆವ ಸ್ಪೆಶಲ್ ಕಾರಿಡಾರ್‌

ಕಲಿಯುಗದ ಕಾಮಧೇನು ಎಂದೇ ಖ್ಯಾತರಾಗಿರುವ ಗುರು ರಾಘವೇಂದ್ರರ ಬಗ್ಗೆ, ಗುರು ಎಂಬುದಕ್ಕೆ ಅವರೆಂಥ ಆದರ್ಶ ಎಂಬುದರ ಬಗ್ಗೆ, ಅವರ ಪವಾಡಗಳ ಬಗ್ಗೆ, ಆರಾಧನಾ ಮಹೋತ್ಸವದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಾರೆ ಉಡುಪಿಯ ಧಾರ್ಮಿಕ ವಿದ್ವಾಂಸರಾದ ಕೃಷ್ಣರಾಜ್ ಭಟ್ ಕುತ್ಪಾಡಿ.