22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಕರ್ಕಾಟಕ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?
ಕರ್ಕಾಟಕಕ್ಕೆ ಗುರುಬಲ ಬಂದಿದೆ ಎಂಬುದು ಒಳ್ಳೆಯ ವಿಷಯವಾದರೂ, ಅಷ್ಟಮದಲ್ಲಿ ಶನಿ, ದಶಮದಲ್ಲಿ ರಾಹು ಇರುವುದರಿಂದ ವರ್ಷ ಅಷ್ಟೊಂದು ಚೆನ್ನಾಗಿರುವುದಿಲ್ಲ. ಇದರಿಂದ ಶಾರೀರಿಕ ಬಾಧೆಗಳ ಉಲ್ಬಣ, ಹೆಚ್ಚುವ ಸ್ತ್ರೀ ವಿರೋಧ, ಶಾಂತಿ ಸಮಾಧಾನ ಮರೀಚಿಕೆಯಂತಾಗಬಹುದು, ವ್ಯಾಪಾರ ನಷ್ಟವಾಗಬಹುದು ಎಂದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಈ ನಷ್ಟಗಳ ಭರಿಸಲು ಪರಿಹಾರಗಳನ್ನು ಏನು ಮಾಡಬಹುದೆಂಬುದನ್ನು ಕೂಡಾ ತಿಳಿಸಿದ್ದಾರೆ.
ಗುರು ಚಂಡಾಲ ಯೋಗ; ಮಿಥುನಕ್ಕೆ ಗುರು ಸತ್ಫಲ ಪಡೆಯಲು ರಾಹು ಅಡ್ಡಗಾಲು, ಪರಿಹಾರವೇನು?