ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ

Mar 27, 2023, 9:44 AM IST

ಏಪ್ರಿಲ್ 1 ಮಧ್ಯರಾತ್ರಿಯ ಸಮಯಕ್ಕೆ ಗುರುವಿಗೆ ರವಿಯಿಂದಾಗಿ ಅಸ್ತ ದೋಷ ಉಂಟಾಗುತ್ತದೆ. ಅಲ್ಲಿಂದ 30 ದಿನಗಳ ಕಾಲ ಅಂದರೆ, ಮೇ 30ರವರೆಗೆ ಗುರು ಅಸ್ತನಾಗಿರಲಿದ್ದಾನೆ. ವಿವಾಹ, ಧ್ವಜ ಸ್ಥಾಪನೆ ಸೇರಿದಂತೆ ಯಾವುದೇ ಮಂಗಳ ಕಾರ್ಯಕ್ಕೆ ಈ ದಿನಗಳಲ್ಲಿ ಮುಹೂರ್ತಗಳು ಇರುವುದಿಲ್ಲ. ಇದನ್ನು ಮೌಢ್ಯ ಕಾಲ ಎಂದು ಆಚರಿಸಲಾಗುತ್ತದೆ. ಗುರುವಿಗೆ ರವಿಯಿಂದ ಶಕ್ತಿ ನಷ್ಟವಾದರೆ, ಶನಿಗೆ ಸೂರ್ಯನಿಂದ ಸಧ್ಯ ಶಕ್ತಿ ವೃದ್ಧಿಯಾಗಿದೆ. ಇನ್ನು ಏಪ್ರಿಲ್‌ನಲ್ಲಿ ರಾಹುವಿಗೂ ರವಿಯಿಂದ ಶಕ್ತಿ ವೃದ್ಧಿಯಾಗುತ್ತದೆ. ಈ ಪಾಪ ಗ್ರಹಗಳ ಶಕ್ತಿ ವೃದ್ಧಿಯಿಂದ ಹಾಗೂ ಶುಭ ಗ್ರಹದ ಶಕ್ತಿಹೀನತೆಯಿಂದ ಲೋಕದಲ್ಲಿ ಪಾಪ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಾಶ್ಯಪ. 

ಇನ್ನೊಂದು ತಿಂಗಳು ಗುರು ಗಂಡಾಂತರ; ಯಾರಿಗೇನು ಸಮಸ್ಯೆ?