ದೇವಸ್ಥಾನದ ಊಟ ಆರೋಗ್ಯಕರ, ತಪ್ಪು ಕಲ್ಪನೆ ಬೇಡ: ಖ್ಯಾತ ಡಯಟೇಶಿಯನ್ ಹೇಳಿದ್ದೇನು?

Jul 22, 2023, 10:33 AM IST

ದೇವಸ್ಥಾನದ ಊಟ ಆರೋಗ್ಯಕ್ಕೆ ಹಾನಿಕಾರ ಅಲ್ಲ ಎಂದು ಡಯಟೇಶಿಯನ್ ಡಾ. ಹೆಚ್.ಎಸ್ ಪ್ರೇಮಾ ಹೇಳಿದರು. ದೇವಸ್ಥಾನದಲ್ಲಿ ಸಿಹಿ ತಿಂಡಿ ಹೊರತು ಪಡಿಸಿ ಉಳಿದ ಎಲ್ಲವನ್ನೂ ಬಿಸಿಯಾಗಿ ಕೊಡುತ್ತಾರೆ. ಬಹುತೇಕ ದೇವಸ್ಥಾನಗಳಲ್ಲಿ ರೋಟಿ-ದಾಲ್, ಸಕ್ಕರೆ ಪೊಂಗಲ್, ಪುಳಿಯೋಗರೆ ಸೇರಿದಂತೆ ಅನೇಕ ರೀತಿಯ ಪ್ರಸಾದವನ್ನು ಬಿಸಿ ಇರುವಾಗಲೇ ಕೊಡುತ್ತಾರೆ. ಬಿಸಿ ಆಹಾರಗಳು ಎಂದಿಗೂ ನಮ್ಮ ನಮ್ಮ ಆರೋಗ್ಯವನ್ನು ಹಾಳು ಮಾಡಲ್ಲ ಎಂದರು. ಹಾಗೂ ಎಲ್ಲಾ ದೇವಾಲಯಗಳಲ್ಲಿ ತುಂಬಾ ಶುಚಿತ್ವದಿಂದ ಅಡುಗೆ ಮಾಡುತ್ತಾರೆ. ಹಾಗೂ ಒಲೆ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಪ್ರಸಾದ ಮಾಡುತ್ತಾರೆ. ಇದು ತುಂಬಾ ಶುಭ್ರ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಅವರು ಹೇಳಿದರು. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಮಠ-ಮಂದಿರಗಳಿಗೆ ಪ್ರಮುಖ ಪ್ರಾಮುಖ್ಯತೆ ಇದೆ. ಅಲ್ಲಿನ ಊಟ ಪ್ರಸಾದವೂ ಮನುಷ್ಯನಿಗೆ ಆರೋಗ್ಯಕರ ಎಂದು ಹೇಳಿದರು.