ವೃಶ್ಚಿಕ ರಾಶಿಗೆ ಧನಾಧಿಪತಿ ಗ್ರಹ ಯಾರು? ಈ ರಾಶಿಯವರು ಹಣವಂತರಾಗಲು ಯಾವ ಗ್ರಹದ ಅನುಗ್ರಹ ಬೇಕು? ಆ ಗ್ರಹ ಮಾರಕ ಸ್ಥಾನದಲ್ಲಿದ್ದರೆ ಅನುಗ್ರಹ ಪಡೆಯಲು ಏನು ಮಾಡಬೇಕು?
ವೃಶ್ಚಿಕ ರಾಶಿಗೆ ರಾಶಿಯ ಎರಡನೇ ಮನೆಯಲ್ಲಿ ಗುರು ಇದ್ದರೆ ಅವರ ಸಂಪತ್ತು, ಸಮೃದ್ಧಿ ಬರುತ್ತದೆ. ಸ್ಪುಟವಾದ ವಾಗ್ಬಲ ಬರುತ್ತದೆ. ಬುದ್ಧಿವಂತಿಕೆ ಹೊಳೆಯುತ್ತದೆ. ಅತ್ಯುತ್ತಮ ಆಹಾರ ಸಿಗುವ ಯೋಗ ಕೂಡಾ ಬರುತ್ತದೆ. ಒಂದು ವೇಳೆ ವೃಶ್ಚಿಕ ರಾಶಿಗೆ ಈ ಧನಬಲವಿಲ್ಲವೆಂದಾದಾಗ ಅವರು ಏನು ಮಾಡಬೇಕು?
ದ್ವಿತೀಯ ಮನೆಯಲ್ಲಿ ಪಾಪ ಗ್ರಹವಿದ್ದಾಗ ಅವರು ಯಾವ ಪರಿಹಾರಗಳನ್ನು ಮಾಡಿದರೆ ದೋಷ ತಗ್ಗಿ, ಧನಬಲ ಪಡೆಯಬಹುದು ಇತ್ಯಾದಿ ವಿವರಗಳನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡುತ್ತಾರೆ.