ಹುಡುಗಿಗೆ ವರನ ವೇಷ ಹಾಕಿ ಹರಕೆ ಸಲ್ಲಿಕೆ, ಹೀಗೆ ಮಾಡಿದ್ರೆ ಆರೋಗ್ಯ ಭಾಗ್ಯ!

Mar 29, 2022, 2:18 PM IST

ಈ ದೇವಾಲಯ(temple)ದ ವೈಶಿಷ್ಠ್ಯತೆಯೇ ಇದು. ಇಲ್ಲಿ ವಧು(bride)ವಿನಂತೆ ಅಲಂಕರಿಸಿಕೊಂಡ ಗಂಡು ಹುಡುಗ ಬರುತ್ತಾನೆ. ಆದರೆ, ಮದುವೆಯೇನಲ್ಲ, ವರ ಇರುವುದೂ ಇಲ್ಲ. ವರ(groom)ನಂತೆ ಸಿಂಗರಿಸಿಕೊಂಡ ಹುಡುಗಿಯರೂ ಬರುತ್ತಾರೆ. ಆದರೆ, ವಧುವಿರಲ್ಲ!

ಅರೆ! ಏನಪ್ಪಾ ಈ ವಿಚಿತ್ರ ಎಂದುಕೊಂಡ್ರಾ? ಮಕ್ಕಳ ಆರೋಗ್ಯ(health) ವೃದ್ಧಿಗಾಗಿ ಸಲ್ಲಿಸುವ ಹರಕೆ ಇದಾಗಿದೆ. 
ಹೌದು, ಕೊಡಗು(Kodagu) ಜಿಲ್ಲೆಯ ಇಬ್ನಿವಳವಾಡಿ ಗ್ರಾಮದಲ್ಲಿರುವ ಭದ್ರಕಾಳಿ ದೇವಾಲಯದಲ್ಲಿ ಇಂಥದೊಂದು ವಿಶಿಷ್ಠ ಆಚರಣೆ ಇದೆ. ಗ್ರಾಮದಲ್ಲಿ ಮಕ್ಕಳಿಗೆ ಏನಾದರೂ ಸಮಸ್ಯೆ ಕಾಣಿಸಿಕೊಂಡಲ್ಲಿ ಈ ದೇವರಿಗೆ ಹರಕೆ ಹೊತ್ತುಕೊಳ್ಳಲಾಗುತ್ತದೆ. ಅಂದರೆ ಹುಡುಗನಿಗೆ ಮದುಮಗಳಂತೆ ಹಾಗೂ ಹುಡುಗಿಗೆ ಮದುಮಗನಂತೆ ಅಲಂಕಾರ  ಮಾಡಿ ದೇವಾಲಯಕ್ಕೆ ಕರೆದುಕೊಂಡು ಬಂದು ಹರಕೆ ಒಪ್ಪಿಸುತ್ತಾರೆ. ಮದುವೆ ಸಂಪ್ರದಾಯದಂತೆ ಇಲ್ಲಿ ಎಲ್ಲವೂ ನಡೆಯುತ್ತದೆ. ಆದರೆ  ವಧುವಿಗೆ ಇಲ್ಲಿ ವರನಿರಲ್ಲ. ಪೋಷಕರು ತಮ್ಮ ಮಕ್ಕಳನ್ನು ಈ ರೀತಿ ಕರೆದುಕೊಂಡು ಬಂದು ಹರಕೆ ತೀರಿಸಿ ನಿರಾಳರಾಗುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ವೃದ್ದಿಯಾಗುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿದೆ.

Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ

ಇದೇ ಅಲ್ಲದೆ, ಇನ್ನೂ ಹಲವಷ್ಟು ವಿಶಿಷ್ಠ ಆಚರಣೆಗಳನ್ನು ಇಲ್ಲಿನ ಭದ್ರಕಾಳಿ ಉತ್ಸವದಲ್ಲಿ ಕಾಣಬಹುದು. ಅವೆಂದರೆ ಭಕ್ತಾದಿಗಳ ನವಿಲು ನೃತ್ಯ,  ಜಿಂಕೆ ಕೊಂಬು ಹಿಡಿದು ಡ್ಯಾನ್ಸ್ ಇತ್ಯಾದಿ. ಮಡಿಕೇರಿ ಸಮೀಪದ ಈ ಗ್ರಾಮದಲ್ಲಿ ಸುಮಾರು 600 ವರ್ಷದಿಂದಲೂ ಭದ್ರಕಾಳಿ ದೇವರ ಉತ್ಸವ  ವಿಭಿನ್ನ ಸಂಪ್ರದಾಯಗಳೊಂದಿಗೆ ನಡೆಯುತ್ತವೆ.