Aug 30, 2021, 7:49 PM IST
ಮಹಾಭಾರತ ಕತೆಯನ್ನು ಸ್ವಾಮೀಜಿಗಳು ವಿವರಿಸಿದ್ದಾರೆ. ಕುರುವಂಶದ ಉಗಮದ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ರಾಜ ಪ್ರದೀಪ ಜಪ ಮಾಡುತ್ತಿರುವಾಗ ಗಂಗಾ ಮಾತೆ ಮೇಲೆ ಬಂದು ಆತನ ತೊಡೆಯ ಮೇಲೆ ಕುಳಿತುಕೊಳ್ಳುತ್ತಾಳೆ. ಆಗ ಗಂಗೆ ನಾನು ನಿನ್ನನ್ನು ಮೋಹಿಸಿ ಬಂದಿದ್ದೇನೆ ಎನ್ನುತ್ತಾಳೆ.
ಆಗ ಪ್ರದೀಪ ನಾನು ಕ್ಷತ್ರಿಯರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲ್ಲ ಎನ್ನುತ್ತಾನೆ. ನಾನು ನಿನ್ನನ್ನೇ ಕಾಮಿಸಿ ಬಂದಿದ್ದೇನೆ. ದೇವ ಕನ್ಯೆಯಾದ ನನ್ನನ್ನು ಸ್ವೀಕರಿಸು ಎಂದು ಒತ್ತಾಯ ಮಾಡುತ್ತಾಳೆ. ಮುಂದೆ ಏನಾಯಿತು?