ರಾಹು ಕೇತು ಗುರು ಗ್ರಹಗಳ ಪಲ್ಲಟದಿಂದಾಗುವ ಬದಲಾವಣೆಗಳ ಬಗ್ಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಭವಿಷ್ಯ ನುಡಿದಿದ್ದಾರೆ.
ಬಹಳ ಅಪರೂಪದ ವಿದ್ಯಾಮಾನದಂತೆ ಈ ತಿಂಗಳಲ್ಲಿ ಹಲವಾರು ಗ್ರಹಗಳು ರಾಶಿ ಬದಲಾವಣೆ ಮಾಡುತ್ತಿವೆ. ಈಗಾಗಲೇ ರಾಹು, ಕೇತು, ಬುಧ, ಸೂರ್ಯ, ಗುರುವಿನ ಸ್ಥಾನ ಬದಲಾಗಿದೆ. ಗುರು ಮತ್ತೊಮ್ಮ ಇನ್ನೈದು ದಿನದಲ್ಲಿ ಸ್ಥಾನ ಬದಲಿಸಲಿದ್ದಾನೆ. ಈ ತಿಂಗಳ ಕೊನೆಯಲ್ಲಿ ಶನಿ, ಕುಜರ ಪಲ್ಲಟವೂ ನಡೆಯಲಿದೆ. ಇದರಿಂದ ಸಾಲು ಸಾಲು ಗಂಡಾಂತರಗಳು ನಡೆಯುತ್ತವೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರಬಾಬು ಶರ್ಮಾ ಭವಿಷ್ಯ ನುಡಿದಿದ್ದಾರೆ.
ಹೊಸ ವರ್ಷಾರಂಭದಲ್ಲೇ ಯುದ್ಧದ ಸುದ್ದಿಗಳು, ಶ್ರೀಲಂಕಾ, ನೇಪಾಳಗಳು ಹಣವಿಲ್ಲದೆ, ಅಲ್ಲಿನ ಜನ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸುದ್ದಿಗಳು, ಕೋಮು ದಳ್ಳುರಿಗಳು ಹೆಚ್ಚಿವೆ. ಒಂದೇ ಒಂದು ಸಮಾಧಾನದ ವಿಷಯವೆಂದರೆ ಕೊರೋನಾ ವೈರಸ್ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವುದು. ಆದರೆ ಆ ನೆಮ್ಮದಿಯೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬಂಥ ಭವಿಷ್ಯವನ್ನು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.
ಧರ್ಮಕ್ಕೂ ಮಿಗಿಲಾದ ಭಕ್ತಿ: ಮುಸ್ಲಿಂ ರಾಮ ಭಕ್ತನೊರ್ವರಿಂದ ಶ್ರೀರಾಮ ಕೋಟಿ ವ್ರತ!
ಹೌದು, ಈ ತಿಂಗಳಲ್ಲಾಗುವ ಪ್ರಮುಖ ಗ್ರಹಗಳ ಸ್ಥಾನ ಪಲ್ಲಟದಿಂದ ಮತ್ತೊಂದು ವೈರಸ್ ಹುಟ್ಟಿಕೊಳ್ಳಲಿದೆ, ಐದು ವರ್ಷಗಳ ಅದರ ಆರ್ಭಟ ನಲುಗಿಸಲಿದೆ, ಜಗತ್ತಿನಲ್ಲಿ ವಿಪತ್ತು ಹೆಚ್ಚಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ ಬ್ರಹ್ಮಾಂಡ ಗುರೂಜಿ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ ಬನ್ನಿ.