ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!

ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!

Published : Sep 30, 2025, 03:22 PM IST

ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್​ ಹೇಗೆ ಪರಭಾಷಾ ಸ್ಟಾರ್ಸ್​ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್​​ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ.

ಟಾಲಿವುಡ್​ಸೂಪರ್ ಸ್ಟಾರ್ ಜ್ಯೂನಿಯರ್​ಜೂ. ಎನ್‌ಟಿಆರ್​(Jr NTR) ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಾರಂತೆ. ಕಾಂತಾರದಲ್ಲಿ ಜ್ಯೂನಿಯರ್ ಎನ್​ಟಿಆರ್ ನಟಿಸಿದ್ದಾರಂತೆ. ಜ್ಯೂನಿಯರ್ ಎನ್​ಟಿಆರ್ ಹಾಗು ಪ್ರಶಾಂತ್ ನೀಲ್ ಸಿನಿಮಾದಲ್ಲಿ ನಮ್ಮ ಶೆಟ್ರು ಕಾಣಿಸುತ್ತಾರಂತೆ. ಹೀಗೆ ಜ್ಯೂನಿಯರ್ ಎನ್‌ಟಿಆರ್ ಹಾಗು ರಿಷಬ್ ಶೆಟ್ರು ಬಗ್ಗೆ ತರಹೇವಾರಿ ಕಥೆ ಕವನಗಳೆಲ್ಲಾ ಸೃಷ್ಟಿಯಾಗಿದ್ವು. ಅವರೆಲ್ಲರ ಹಾರೈಕೆಯೋ ಏನೋ.. ರಿಷಬ್ ಶೆಟ್ರು ತಂಡದ ಜೊತೆ ತಾರಕ್​​ ಪ್ರತ್ಯಕ್ಷರಾಗಿದ್ದಾರೆ. ಅದು ಯಾಕೆ ಅಂತ ಗೊತ್ತಾ..? ಇಲ್ಲಿದೆ ನೋಡಿ..

ರಿಷಬ್ ಶೆಟ್ಟಿ ಈಗ ಚಿತ್ರ ಜಗತ್ತಿನ ಡಾರ್ಲಿಂಗ್.. ಒಂದು ಕಡೆ ರಾಕಿಂಗ್ ಸ್ಟಾರ್ ಯಶ್​ ಹೇಗೆ ಪರಭಾಷಾ ಸ್ಟಾರ್ಸ್​ಗಳ ಮನಸ್ಸು ಗೆಲ್ಲುತ್ತಾ ಹೋಗುತ್ತಿದ್ದಾರೋ. ಹಾಗೆ ಮತ್ತೊಂದು ಕಡೆ ರಿಷಬ್ ಶೆಟ್ಟಿ ನಮ್ಮ ಅಕ್ಕ ಪಕ್ಕದ ರಾಜ್ಯದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹಾರ್ಟ್​​ನಲ್ಲಿ ಜಾಗ ಭದ್ರ ಮಾಡಿಕೊಂಡಿದ್ದಾರೆ. ರಿಷಬ್ ಹೃದಯದಲ್ಲಿ ಭದ್ರವಾಗಿರೋ ಸ್ಟಾರ್​​ರಲ್ಲೊಬ್ಬರು ಜ್ಯೂನಿಯರ್ ಎನ್​​ಟಿಆರ್..

ಯೆಸ್, ಜ್ಯೂನಿಯರ್ ಎನ್​ಟಿಆರ್​. ನಮ್ಮ ಪವರ್ ಸ್ಟಾರ್ ಪುನೀತ್​ ರಾಜ್​​ಕುಮಾರ್​ ಅಪ್ಪ ಅಪ್ಪಟ ಸ್ನೇಹಿತ. ಈ ತಾರಕ್​​ ರಾಮ್​​​ ಅಪ್ಪುಗಾಗಿ ಗೆಳೆಯಾ ಗೆಳೆಯಾ ಅಂತ ಸಾಂಗ್ ಹಾಡಿ ಹೋಗಿದ್ದನ್ನ ಎಂದಾದ್ರು ಮರೆಯೋಕೆ ಸಾಧ್ಯನಾ..
( ಜ್ಯೂಎನ್​ಟಿಆರ್ ಹಾಡಿರೋ ಕನ್ನಡದ ಗೆಳೆಯಾ ಸಾಂಗ್​ ಫ್ಲೊ..)

ರಿಷಬ್ ಶೆಟ್ಟಿ ಜ್ಯೂನಿಯರ್ ಎನ್​ಟಿಆರ್ ಇದೀಗ ಮತ್ತೆ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅದು ಕಾಂತಾರದ ವೇದಿಕೆ ಮೇಲೆ ಕುಂದಾಪುರದ ಈ ಖಲಿಗಳು ಮಿಂಚಿದ್ದಾರೆ. ಹೈದರಾಬ್​​​ನಲ್ಲಿ ಕಾಂತಾರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದ್ದು, ನಟ ರಿಷಬ್ ಶೆಟ್ಟಿಯ ಗೆಲುವಿಗಾಗಿ ಗೆಳೆಯ ಜ್ಯೂ,ಎನ್​ಟಿಆರ್​​ ಗೆಸ್ಟ್ ಆಗಿ ಬಂದು ಇಡೀ ಕಾಂತಾರ ತಂಡದ ಬೆನ್ನು ತಟ್ಟಿದ್ದಾರೆ..

ಜ್ಯೂನಿಯರ್​ ಎನ್​​ಟಿಆರ್ ರಕ್ತದಲ್ಲಿ ಕರ್ನಾಟಕದ ನಂಟಿದೆ. ತಾರಕ್​ ರಾಮ್​​​​​​ ತಾಯಿ ಹುಟ್ಟಿದ್ದು ಕರ್ನಾಟಕದ ಉಡುಪಿಯ ಕುಂದಾಪುರದಲ್ಲಿ. ಹೀಗಾಗಿ ಜ್ಯೂ,ಎನ್​ಟಿಆರ್​​​ಗೆ ಕನ್ನಡದ ನಂಟು ರಕ್ತಗತವಾಗೆ ಬಂದಿದೆ. ಕನ್ನಡಿಗರ ಮೇಲೆ ಅಪಾರ ಪ್ರೀತಿ ಅಭಿಮಾನ ಬೆಳೆಸಿಕೊಂಡಿರೋ ಜ್ಯೂನಿಯರ್ ಎನ್​ಟಿಆರ್​ ಕನ್ನಡಿಗರ ದೊಡ್ಡ ಕನಸು ಕಾಂತಾರ ಅಧ್ಯಾಯ ಒಂದರ ಸಕ್ಸಸ್​​ಗಾಗಿ ಹಾರೈಸಿದ್ದಾರೆ. ಅಷ್ಟೆ ಅಲ್ಲ ಕಾಂತಾರದ ಸೂತ್ರಧಾರಿ ರಿಷಬ್ ಶೆಟ್ಟಿ ಜೊತೆಗಿನ ಸ್ನೇಹವನ್ನೂ ಮೆಲುಕು ಹಾಕಿದ್ರು..

ಕಾಂತಾರ ಚಾಪ್ಟರ್​ ಒನ್ ಸಿನಿಮಾ ಶೂಟಿಂಗ್ ನಡೆಯುವಾಗ್ಲೆ ಟಾಲಿವುಡ್ ಸ್ಟಾರ್​ ಜ್ಯೂನಿಯರ್ ಎನ್​​ಟಿಆರ್​ ಉಡುಪಿಗೆ ಬಂದಿದ್ರು. ತನ್ನ ಅಮ್ಮ ಶಾಲಿನಿ ಅವರು ಕುಂದಾಪುರದವರೇ ಆಗಿರೋದ್ರಿಂದ ಉಡುಪಿ ಶ್ರೀ ಕೃಷ್ಣ ದೇವಾಲಯಗಳಿಗೆ ಭೇಟಿ ನೀಡಿ ಎಂದೋ ಮಾಡಿದ್ದ ಹರಕೆಗಳನ್ನ ತೋರಿಸಿದ್ರು. ಆಗ ನಟ ರಿಷಬ್ ಶೆಟ್ಟಿ ದಂಪತಿ
ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿ ಜ್ಯೂ,ಎನ್​ಟಿಆರ್​​ ರನ್ನ ಸ್ವಾಗತಿಸಿದ್ರು. ಇಡೀ ಫ್ಯಾಮಿಲಿಗೆ ಅಥಿತಿ ಸತ್ಕಾರ ಮಾಡಿ, ದೇಗುಲಗಳ ದರ್ಶನದಲ್ಲಿ ಜೊತೆಯಾಗಿದ್ರು. ಅಷ್ಟೆ ಅಲ್ಲ ತನ್ನೂರಾದ ಕೆರಾಡಿಯನ್ನೂ ಜ್ಯೂನಿಯರ್​ ಎನ್​ಟಿಆರ್​​​​ಗೆ ಪರಿಚಯಿಸಿದ್ರು ರಿಷಬ್...

ಕಾಡುಬೆಟ್ಟದ ಶಿವನನ್ನು ಮೆಚ್ಚಿದ್ದ ಜ್ಯೂ,ಎನ್​ಟಿಆರ್..!

ಈ ಹಿಂದೆ ಕಾಂತಾರ ಸಿನಿಮಾ ಬಂದಾಗ ಜ್ಯೂನಿಯರ್ ಎನ್​​ಟಿಆರ್​ ಆ ಸಿನಿಮಾ ನೋಡಿ ಮೆಚ್ಚಿಕೊಂಡಿದ್ರು. ಅಷ್ಟೆ ಅಲ್ಲ ರಿಷಬ್​ರನ್ನ ಕೆರಾಡಿಯಲ್ಲಿ ಭೇಟಿ ಮಾಡಿದಾಗ ನನಗೆ ರಿಷಬ್ ಶೆಟ್ಟಿ ದೇವರು ಕೊಟ್ಟ ಗೆಳೆಯ ಅಂತ ಹೇಳಿದ್ರು. ಇದಾದ್ಮೇಲೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ. ಕಾಂತಾರ ಚಾಪ್ಟರ್ ಒಂದರಲ್ಲಿ ಜ್ಯೂಎನ್​ಟಿಆರ್ ನಟಿಸುತ್ತಿದ್ದಾರೆ ಅಂತೆಲ್ಲಾ ಸುದ್ದಿ ಹಬ್ಬಿತ್ತು. ಆದ್ರೆ ಅದು ಸತ್ಯಕ್ಕೆ ದೂರಾದ ಮಾತು. ಈಗ ಕಾಂತಾರ ದಂತಕತೆಯನ್ನ ತನ್ನ ಆಂಧ್ರ ನಾಡಿನ ಮಂದಿಗೆ ತೋರಿಸೋಕೆ ಜ್ಯೂ,ಎನ್​ಟಿಆರ್​ ಕಾಂತಾರ ವೇಧಿಕೆ ಹತ್ತಿದ್ದು,  ಆಂಧ್ರದಲ್ಲೂ ಕಾಂತಾರದ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಈ ಸಿನಿಮಾವನ್ನ ನಮ್ಮ ತೆಲುಗು ಮಂದಿ ಗೆಲ್ಲಿಸುತ್ತಾರೆ ಅಂತ ತಾರಕ್ ರಾಮ್ ರಿಷಬ್‌ಗೆ ಭರವಸೆ ಕೊಟ್ಟಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ!

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more