'ಬಾ ನಲ್ಲೆ ಮಧುಚಂದ್ರಕೆ', 'ರಿಂಗ್ ರೋಡ್ ಶುಭಾ'ನಲ್ಲೂ ಇಂಥದ್ದೇ ಕಥೆ; ಮೇಘಾಲಯ ಕೇಸ್​ ಸಿನಿಮಾ ಆಗುತ್ತಾ?

'ಬಾ ನಲ್ಲೆ ಮಧುಚಂದ್ರಕೆ', 'ರಿಂಗ್ ರೋಡ್ ಶುಭಾ'ನಲ್ಲೂ ಇಂಥದ್ದೇ ಕಥೆ; ಮೇಘಾಲಯ ಕೇಸ್​ ಸಿನಿಮಾ ಆಗುತ್ತಾ?

Published : Jun 14, 2025, 11:48 AM ISTUpdated : Jun 14, 2025, 11:52 AM IST

ಮೊದಲು ವರ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಆತನ ಪತ್ನಿ ಸೋನಮ್ ರಘುವಂಶಿಯೇ ಪತಿಯ ಮರ್ಡರ್ ಮಾಡಿಸಿದ್ದು ಅನ್ನೋ ಬೆಚ್ಚಿಬೀಳಿಸೋ ಸಂಗತಿ ಬಯಲಾಗಿತ್ತು. ಸೋನಮ್ ತನ್ನ ಪ್ರಿಯತಮನಿಗಾಗಿ ಸುಪಾರಿ ಕೊಟ್ಟು ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿದ್ಳು.

ಇತ್ತೀಚಿಗೆ ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಮರ್ಡರ್​ ಕೇಸ್ ಇಡೀ ದೇಶಾದ್ಯಂತ ಸದ್ದು ಮಾಡಿದೆ. ಅದ್ರಲ್ಲೂ ನಮ್ಮ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಜೊತೆಗೆ ಇದನ್ನ ಹೋಲಿಕೆ ಮಾಡ್ತಾ ಇದ್ದಾರೆ. ಈ ಕಥೆಯನ್ನಿಟ್ಟುಕೊಂಡು ಬಾ ನಲ್ಲ ಮಧುಚಂದ್ರಕೆ ಅನ್ನೋ ಸಿನಿಮಾ ಮಾಡಬಹುದು ಅಂತ ಸಲಹೆ ಕೊಡ್ತಾ ಇದ್ದಾರೆ.

ಹೌದು, ಇತ್ತೀಚಿಗೆ ಮೇಘಾಲಯದಲ್ಲಿ ನಡೆದ ಮರ್ಡರ್ ಕೇಸ್ ಬಗ್ಗೆ ದೇಶಾದ್ಯಂತ ಚರ್ಚೆಯಾಗ್ತಾ ಇದೆ. ಅಸಲಿಗೆ ಮೇಘಾಲಯಕ್ಕೆ ಹನಿಮೂನ್​ಗೆ ಅಂತ ಬಂದಿದ್ದ ಇಂದೋರ್ ಮೂಲದ ನವದಂಪತಿ ಮೇ 23ನೇ ತಾರೀಖು ಕಣ್ಮರೆ ಆಗಿದ್ರು. ಇದೊಂದು ಮಿಸ್ಸಿಂಗ್ ಕೇಸ್ ಅಂದುಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ಬಳಿಕ ರೋಚಕ ವಿವರಗಳು ಸಿಕ್ಕಿದ್ವು.

ಮೊದಲು ವರ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಬಳಿಕ ಆತನ ಪತ್ನಿ ಸೋನಮ್ ರಘುವಂಶಿಯೇ ಪತಿಯ ಮರ್ಡರ್ ಮಾಡಿಸಿದ್ದು ಅನ್ನೋ ಬೆಚ್ಚಿಬೀಳಿಸೋ ಸಂಗತಿ ಬಯಲಾಗಿತ್ತು. ಸೋನಮ್ ತನ್ನ ಪ್ರಿಯತಮನಿಗಾಗಿ ಸುಪಾರಿ ಕೊಟ್ಟು  ಕಟ್ಟಿಕೊಂಡ ಗಂಡನ ಕೊಲೆ ಮಾಡಿಸಿದ್ಳು.

ಇದನ್ನ ನೋಡಿದವರು 1993ರಲ್ಲಿ ಬಂದ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾವನ್ನ ನೆನಪಿಸಿಕೊಂಡಿದ್ರು. ಅಸಲಿಗೆ ಈ ಸಿನಿಮಾದಲ್ಲಿ ನಾಯಕ ನಾಯಕಿನ್ನ ಮಧುಚಂದ್ರಕೆ ಕರೆದೊಯ್ದು ಕೊಲೆ ಮಾಡ್ತಾನೆ. ಆದ್ರೆ ಸೋನಮ್ ಕೇಸ್​ನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿಸಿದ್ದಾಳೆ. ಅಷ್ಟು ಬಿಟ್ರೆ ಎಲ್ಲಾ ಸೇಮ್ ಟು ಟೇಮ್.

ಅಸಲಿಗೆ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕಥೆ ಕೂಡ ನಿಜ ಘಟನೆಯೊಂದರ ಸ್ಪೂರ್ತಿಯಿಂದ ಮೂಡಿಬಂದಿತ್ತು. ಪೊಲೀಸ್ ಅಧಿಕಾರಿಯೊಬ್ರು ಹೇಳಿದ ಕ್ರೈಂ ಕಥೆಯೊಂದನ್ನ ಕೇಳಿ ಬಾ ನಲ್ಲೆ ಮಧುಚಂದ್ರಕೆ ಅನ್ನೋ ಕಾದಂಬರಿ ಬರೆದಿದ್ರು ನಾಗತಿಹಳ್ಳಿ ಚಂದ್ರಶೇಖರ್. ಮುಂದೆ ಅದೇ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಿದ್ರು.

ಇನ್ನೂ ಮೇಘಾಲಯ ಮರ್ಡರ್ ಕೇಸ್​​ಗೆ ಹೋಲಿಕೆಯಾಗುವಂಥಾ ಮತ್ತೊಂದು ಕನ್ನಡ ಸಿನಿಮಾ ಇದೆ. ಅದುವೇ ರಿಂಗ್ ರೋಡ್ ಶುಭಾ. 2015ರಲ್ಲಿ ಬಂದ ಈ ಸಿನಿಮಾ ಕೂಡ ಒಂದು ನೈಜ ಕಥೆಯನ್ನ ಆಧರಿಸಿ ಸಿದ್ದವಾಗಿತ್ತು. 2003ರಲ್ಲಿ ಶುಭಾ ಅನ್ನೋ ಯುವತಿ ಎಂಗೇಜ್ ಮೆಂಟ್ ಅಗಿದ್ದ ತನ್ನ ಭಾವಿ ಪತಿಯನ್ನ ಗೆಳೆಯನಿಗೋಸ್ಕರ ಕೊಲೆ ಮಾಡಿಸಿದ್ದಳು.

ಇದೀಗ ಮೇಘಾಲಯ ಮರ್ಡರ್ ಕೇಸ್​ನ ನೋಡಿ ಈ ಸಿನಿಮಾಗಳನ್ನ ಜನ ನೆನಪು ಮಾಡಿಕೊಳ್ತಾ ಇದ್ದಾರೆ. ಅದ್ರಲ್ಲೂ ಮೇಘಾಲಯ ಹನಿಮೂನ್ ಮರ್ಡರ್ ಕೇಸ್​ನ ಒಂದೊಂದು ವಿವರಗಳು ಕೂಡ ಬೆಚ್ಚಿ ಬೀಳಿಸೋ ತರಹ ಇದಾವೆ. ಸೋ ಇದನ್ನ ಆಧರಿಸಿ ಬಾ ನಲ್ಲ ಮಧುಚಂದ್ರಕೆ ಅನ್ನೋ ಸಿನಿಮಾ ಬಂದ್ರೂ ಅಚ್ಚರಿ ಏನಿಲ್ಲ.!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more