'ಮಾರ್ಟಿನ್' ಚಿತ್ರದಲ್ಲಿ ಧ್ರುವಾ ಸರ್ಜಾ ಹೇಗಿರಲಿದ್ದಾರೆ? ಸುಳಿವು ಬಿಟ್ಟು ಕೊಟ್ಟ ನಿರ್ದೇಶಕ.!

Aug 16, 2021, 5:23 PM IST

ಬೆಂಗಳೂರು (ಆ. 16): ಅದ್ಧೂರಿ ಸಿನಿಮಾ ಮೂಲಕ ಧ್ರುವ ಸರ್ಜಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಎ ಪಿ ಅರ್ಜುನ್, ಇದೀನ 5 ನೇ ಸಿನಿಮಾ ಮಾರ್ಟಿನ್ ನಿರ್ದೇಶಿಸುತ್ತಿದ್ದಾರೆ. 'ಮಾರ್ಟಿನ್' ಚಿತ್ರದ ಬಗ್ಗೆ ಎ ಪಿ ಅರ್ಜುನ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

'ಮಾರ್ಟಿನ್' ಸಿನಿಮಾದಲ್ಲಿ ನಾನು ಮಾರ್ಟಿನ್ ಅಲ್ಲ: ಧ್ರುವಾ ಸರ್ಜಾ

'ನಾನು ಧ್ರುವ ಸರ್ಜಾ ಮತ್ತೆ ಒಂದಾಗುತ್ತಿದ್ದೇವೆ. ಧ್ರುವನ ಇಮೇಜ್ ಈ‌ ಸಿನಿಮಾದಿಂದ ಬೇರೆ ಲೆವೆಲ್‌ಗೆ ಹೋಗುತ್ತೆ. ಧ್ರುವ ಸರ್ಜಾ ಒಬ್ಬ ಗ್ಯಾಂಗ್‌ಸ್ಟರ್, ಲವರ್ ಬಾಯ್ ಆಗಿರ್ತಾರೆ. ಮಾರ್ಟಿನ್ ಆಕ್ಷನ್ & ಲವ್ ಸ್ಟೋರಿಯ ಸಿನಿಮಾ, ಆಗಸ್ಟ್ 18ರಿಂದ ಶೂಟಿಂಗ್ ಶುರುವಾಗಲಿದೆ. ಡಿಸೆಂಬರ್ ಒಳಗೆ ಸಿನಿಮಾದ ಶೂಟಿಂಗ್ ಬಿಡುಗಡೆ ಮಾಡುತ್ತೇವೆ. ಈ ಸಿನಿಮಾ ಐದು ಭಾಷೆಯಲ್ಲಿ ಬರಲಿದೆ' ಎಂದಿದ್ದಾರೆ.