
ಪರಿಹಾರದ ಆಸೆಗಾಗಿ ಪತ್ನಿಯೇ ಗಂಡನನ್ನು ಕೊಂದ ಶಾಕಿಂಗ್ ಕಥೆ. ಹುಲಿ ದಾಳಿ ಎಂದು ಸುಳ್ಳು ಹೇಳಿದ್ದ ಪತ್ನಿ, ಪೊಲೀಸರ ವಿಚಾರಣೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ಬೆಂಗಳೂರು (ಸೆ.13): ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರವು ಪರಿಹಾರ ಒದಗಿಸುವುದು ಸಾಮಾನ್ಯ. ಆದರೆ, ಇದೇ ಹಣದ ಆಸೆಗಾಗಿ ತನ್ನ ಗಂಡನನ್ನೇ ಕೊಂದ ಪತ್ನಿಯೊಬ್ಬಳ ಶಾಕಿಂಗ್ ಕಥೆ ಇದು. ಈಕೆಯ ಕಥೆ ಕೇಳಿದರೆ, ಹಣದ ಮುಂದೆ ಸಂಬಂಧಗಳಿಗೆ ಬೆಲೆಯೇ ಇಲ್ವಾ ಎಂದು ಆಶ್ಚರ್ಯವಾಗುತ್ತದೆ.
ತಾಯಿ ಕಳೆದುಕೊಂಡ ಮರಿ ಆನೆ ರಕ್ಷಿಸಿ ಮಗುವಿನಂತೆ ಆರೈಕೆ, ಫೋಟೋ ಹಂಚಿಕೊಂಡ IFS ಅಧಿಕಾರಿ!
ಇದೊಂದು ಬಡ ಕುಟುಂಬ. ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಸೇರಿ ಬದುಕುತ್ತಿದ್ದರು. ಕೂಲಿ ಕೆಲಸಕ್ಕಾಗಿ ಕಾಡಿನ ಅಂಚಿನ ಹಳ್ಳಿಯೊಂದಕ್ಕೆ ಬಂದು ನೆಲೆಸಿದ್ದರು. ಒಂದು ದಿನ ಗಂಡ ವೆಂಕಟಸ್ವಾಮಿ ಮತ್ತು ಹೆಂಡತಿ ಸಲ್ಲಾಪುರಿ ಮಾತ್ರ ಮನೆಯಲ್ಲಿದ್ದರು. ವೆಂಕಟಸ್ವಾಮಿ ಮನೆಯ ಹೊರಗೆ ಕುಳಿತಿದ್ದಾಗ, ಆತನ ಮೇಲೆ ಹುಲಿ ದಾಳಿ ಮಾಡಿ ಎಳೆದೊಯ್ದಿದೆ ಎಂದು ಸಲ್ಲಾಪುರಿ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸಿದಾಗ ಎಲ್ಲೂ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಸಲ್ಲಾಪುರಿಯನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಗಂಡನನ್ನು ಕೊಂದದ್ದು ಬೇರಾರೂ ಅಲ್ಲ, ಸ್ವತಃ ಆಕೆಯೆಂಬುದು ತಿಳಿದುಬಂದಿದೆ.