ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

ಕಲಬುರಗಿ: ಲಕ್ಷ ಲಕ್ಷ ಇದ್ರೂ ರಸ್ತೆ ಬದಿ ಮಲಗುತ್ತಿದ್ದ ಬಡ್ಡಿ ಬಸಮ್ಮನ ಕೊಂದಿದ್ಯಾರು?

Published : Jul 31, 2024, 01:06 PM ISTUpdated : Jul 31, 2024, 01:10 PM IST

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.
 

ಕಲಬುರಗಿ(ಜು.31):   ಆಕೆ 68 ವರ್ಷದ ಅಜ್ಜಿ... ತನ್ನವರು ಅಂತ ಯಾರೂ ಇಲ್ಲ.. ಆದ್ರೂ ತನ್ನ ಏರಿಯದಲ್ಲಿರೋರಿಗೆಲ್ಲಾ ಬಡ್ಡಿಗೆ ದುಡ್ಡು ಕೊಡ್ತಿದ್ದಳು.. ಕಷ್ಟ ಅಂತ ಬಂದ್ರೆ ಹಿಂದೆ ಮುಂದೆ ನೋಡದೇ ಸಾಲ ಕೊಡ್ತಿದ್ದಳು. ಅಂಥಹ ಅಜ್ಜಿ ಆವತ್ತು ಇದ್ದಕ್ಕಿದ್ದಂತೆ ಮಿಸ್ಸಿಂಗ್​​​​.. ಎಲ್ಲಿ ಹುಡುಕಿದ್ರೂ ಅವಳ ಸುಳಿವು ಸಿಕ್ಕಿರಲಿಲ್ಲ.. ಪರಿಸ್ಥಿತಿ ಹೀಗಿರವಾಗ್ಲೇ ಆಕೆಯ ಸಾವಿನ ಸುದ್ದಿ ಬಂದಿತ್ತು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಬೆಂಕಿ ಹಾಕಿ ಸುಟ್ಟುಬಿಟ್ಟಿದ್ದ.. ಒಂದೇ ಒಂದು ಕ್ಲೂ ಆ ಮರ್ಡರ್​ ಕೇಸ್​ನಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ.. ಆದ್ರೆ ಛಲಬಿಡದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಅಜ್ಜಿಯನ್ನ ಕೊಂದಿದ್ಯಾರು..? ಬಡ್ಡಿ ಬಸ್ಸಮ್ಮಳ ಕೊಲೆಯ ಹಿಂದಿನ ರೋಚಕ ಇನ್ವೆಸ್ಟಿಗೇಷನ್​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಊರಿನವಿರಿಗೆಲ್ಲಾ ಬಡ್ಡಿಗೆ ದುಡ್ಡು ಕೊಟ್ರೂ.. ಈಕೆ ಮಾತ್ರ ಬೀದಿಯಲ್ಲಿ ಜೀವನ ಮಾಡ್ತಿದ್ದಳು.. ಆದ್ರೆ ಆವತ್ತೊಂದು ದಿನ ಇದ್ದಕಿದ್ದಾಗೆ ಬಸಮ್ಮ ಹೆಣವಾಗಿ ಬಿಡ್ತಾಳೆ.. ಹಂತಕ ಆಕೆಯನ್ನ ಬರ್ಬರವಾಗಿ ಕೊಲೆ ಮಾಡಿ ನಂತರ ಪೆಟ್ರೋಲ್​ ಹಾಕಿ ಸುಟ್ಟುಬಿಟ್ಟಿರುತ್ತಾನೆ.

ದೇವರ ಪೂಜೆ ಮಾಡ್ಕೊಂಡು ಜ್ಯೋತಿಷ್ಯ ಹೇಳುತ್ತಿದ್ದ ಪೂಜಾರಿಗೆ ತಾನು ಹೇಳಿದ ಜ್ಯೋತಿಷ್ಯವೇ ಜೀವಕ್ಕೆ ಮುಳುವಾಯ್ತು!

ಬಡ್ಡಿಗೆ ದುಡ್ಡು ಕೊಡ್ತಿದ್ದ ಬಸಮ್ಮ ಅವನೊಬ್ಬನಿಗೆ ತನ್ನ ಬಳಿ ಇದ್ದ ಒಡವೆಯನ್ನೇ ಕೊಟ್ಟು ಬಿಟ್ಟಿದ್ಲು.. ಆತ ಆಕೆಯ ಒಡವೆಗಳನ್ನೆಲ್ಲಾ ಡವಿಟ್ಟು ಲಕ್ಷ ಲಕ್ಷ ಣ ಪಡೆದಿದ್ದ.. ಆದ್ರೆ ನಾಲ್ಕು ತಿಂಗಳ ನಂತರ ಬಸಮ್ಮ ತನ್ನ ಒಡವೆಯನ್ನ ವಾಪಸ್​​ ಕೇಳ್ತಾಳೆ.. ಆದ್ರೆ ಈತನಿಗೆ ಮಾತ್ರ ವಾಪಸ್​ ಕೊಡೋದಕ್ಕೆ ಮನಸ್ಸಾಗೋದಿಲ್ಲ.. ಆಕೆಯನ್ನೇ ಮುಗಿಸಿಬಿಟ್ರೆ ಒಡವೆಯೂ ಉಳಿಯುತ್ತೆ. ಆಕೆಯ ಕಾಟವೂ ಇರೋದಿಲ್ಲ ಅಂತ ತಿಳಿದು ಆಕೆಯನ್ನೇ ಮುಗಿಸೋದಕ್ಕೆ ನಿರ್ಧರಿಸಿಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿಕೊಂಡು ದೇವಸ್ಥಾನಕ್ಕೆ ಹೋಗೋಣ ಅಂತ ಹೇಳಿ ಆಕೆಯನ್ನ ಬೈಕ್​ನಲ್ಲಿ ಕೂರಿಸಿಕೊಂಡು ಹೋಗ್ತಾನೆ.. ಹೋಗುವಾಗ ಪೆಟ್ರೋಲ್​​ ಕೂಡ ಖರೀದಿಸಿ ತೆಗೆದುಕೊಂಡು ಹೋಗ್ತಾನೆ.. ಇವನನ್ನ ನಂಬಿ ಹೋದ ಬಸಮ್ಮ ಹೆಣವಾಗಿ ಹೋಗ್ತಾಳೆ.

ಹಣ ಇದೆ ಅಂತ ಕಂಡ ಕಂಡವರಿಗೆ ಬಡ್ಡಿಗೆ ಕೊಡುತ್ತಿದ್ದ ಬಸಮ್ಮ, ಇದೇ ಹಣದಿಂದಾಗಿಯೇ ಕೊಲೆಯಾಗಿ ಹೋಗಿದ್ದು ವಿಪರ್ಯಾಸವಲ್ಲದೇ ಇನ್ನೇನು ? ಇನ್ನು ಒಡವೆ ಕೊಟ್ಟ ಅಜ್ಜಿಗೆ ಹಣ ಮರಳೀಸುವುದು ಬಿಟ್ಟು ಆಕೆಯನ್ನು ಕೊಂದೇ ಬಿಟ್ಟ ಪಾಪಿ ಸದ್ಯ ಜೈಲು ಸೇರಿದ್ದಾನೆ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more