Jul 3, 2024, 1:05 PM IST
ರಾಜ್ಯ ಸರ್ಕಾರ (state government)ದೊಡ್ಡ ಮುಜುಗರ ಎದುರಿಸುವ ಸಮಯ ಬಂದಂತೆ ಕಾಣುತ್ತಿದೆ. ಇದು ಮಹರ್ಷಿ ವಾಲ್ಮೀಕಿ ನಿಗಮ ಹಗರಣಕ್ಕೆ( Valmiki Corporation scam) ಸಂಬಂಧಿಸಿದ ಸುದ್ದಿಯಾಗಿದೆ. ಕ್ಷಣ ಕ್ಷಣಕ್ಕೂ ಮಾಜಿ ಸಚಿವ ನಾಗೇಂದ್ರ(Nagendra) ಕೊರಳಿಗೆ ಸುತ್ತಿಕೊಳ್ಳುತ್ತಿದೆ ಉರುಳು. ನಾಗೇಂದ್ರರನ್ನ ಎಸ್ಐಟಿ(SIT) ರಕ್ಷಿಸಿದರೂ ಸಿಬಿಐನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾರಿಗೆ ಎಷ್ಟೆಷ್ಟು ದುಡ್ಡು ಹೋಗಿದೆ ಎಂಬ ಮಾಹಿತಿ ಇಲ್ಲಿದೆ. ವಾಲ್ಮೀಕಿ ನಿಗಮದ ಹಣ ಲೂಟಿ ಸಂಬಂಧ ಸಚಿವ ನಾಗೇಂದ್ರ ಕೊಟ್ಟಿದ್ದ ಆದೇಶ ಏನು.?, ಮಾಹಿತಿ ಗೊತ್ತೇ ಇಲ್ಲ ಎಂದಿದ್ದ ಸಚಿವ ನಾಗೇಂದ್ರ ಸಿಕ್ಕಿ ಬೀಳೋದು ಗ್ಯಾರಂಟಿ..? ಎಸ್ಐಟಿ ತನಿಖೆಯ ಇಂಚಿಂಚು ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮಾತ್ರ ಲಭ್ಯವಾಗಿದೆ. ಸಿಬಿಐ (CBI)ತನಿಖೆ ನಡೆಯುತ್ತಿರುವುದರಿಂದ ರಿಸ್ಕ್ ತೆಗೆದುಕೊಳ್ಳಲು ಎಸ್ಐಟಿ ರೆಡಿ ಇಲ್ಲ. ಆರೋಪಿಗಳ ಯಾಥಾವತ್ ಹೇಳಿಕೆ ದಾಖಲಿಸಿ ಕೋರ್ಟ್ ಕೊಟ್ಟಿರುವ ಬಗ್ಗೆ ಖಚಿತ ಮಾಹಿತಿ. ಸಿಸಿಟಿವಿ ದೃಶ್ಯಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು. ನಿಗಮದ ಕೆಲವು ಅಧಿಕಾರಿಗಳು ಬೇಡ ಎಂದರೂ ಹಣ ವರ್ಗಾವಣೆಗೆ ಸೂಚನೆ ನೀಡಲಾಗಿದೆಯಂತೆ. ಯೂನಿಯನ್ ಬ್ಯಾಂಕ್‌ನಲ್ಲಿ ಡೆಪಾಸಿಟ್ ಖಾತೆ ತೆರೆಯಲು ತಾಖೀತು ಮಾಡಿದ್ದು. ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಖುದ್ದು ಸಚಿವರಿಂದ ಮೀಟಿಂಗ್ ನಡೆಸಲಾಗಿದೆಯಂತೆ.
ಇದನ್ನೂ ವೀಕ್ಷಿಸಿ: ಅಂತರಿಕ್ಷದಲ್ಲೇ ಉಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್: ಭೂಮಿಗಿಂತ ವಿಭಿನ್ನ ವಾತಾವರಣ..ಎದುರಾಗಲಿದೆ ಆರೋಗ್ಯ ಸಮಸ್ಯೆ!