ವಿಡಿಯೋ ಚಿತ್ರೀಕರಣ ಸ್ಥಳದಲ್ಲಿ ಮರುಸೃಷ್ಟಿ: ಆಳೆತ್ತರದ ಗೊಂಬೆ ಇಟ್ಟು ಸೀನ್ ರೀ ಕ್ರಿಯೇಟ್ !

ವಿಡಿಯೋ ಚಿತ್ರೀಕರಣ ಸ್ಥಳದಲ್ಲಿ ಮರುಸೃಷ್ಟಿ: ಆಳೆತ್ತರದ ಗೊಂಬೆ ಇಟ್ಟು ಸೀನ್ ರೀ ಕ್ರಿಯೇಟ್ !

Published : Aug 12, 2023, 12:17 PM IST

ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣದಲ್ಲಿ ಸಿಐಡಿ ಪೊಲೀಸರು ಹೇಳಿಕೆಗಳ ಬೆನ್ನುಬಿದ್ದಿದ್ದಾರೆ. ಉಡುಪಿ ಪೊಲೀಸರು ದಾಖಲಿಸಿರುವ ಹೇಳಿಕೆಗಳನ್ನು ಹಸ್ತಾಂತರ ಮಾಡಿಕೊಂಡಿದ್ದು, ತನಿಖೆ ತೀವ್ರ ಗೊಳಿಸಿದ್ದಾರೆ. ಈ ನಡುವೆ ತನಿಖಾಧಿಕಾರಿ ಅಂಜುಮಾಲಾ ನಾಯಕ್, ಜೆಎಂಎಫ್ ಸಿ ಕೋರ್ಟಿಗೆ ತೆರಳಿ ಸಂತ್ರಸ್ತೆ ಮತ್ತು ವಿದ್ಯಾರ್ಥಿನಿಯರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಹಿಂದೂ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ಪ್ರಕರಣ ಸಿಐಡಿಗೆ ಹಸ್ತಾಂತರ ಬೆನ್ನಲ್ಲೇ ನಾಲ್ಕು ದಿನಗಳಿಂದ ಉಡುಪಿಯಲ್ಲಿ ಬೀಡು ಬಿಟ್ಟಿರುವ ಸಿಐಡಿ ತನಿಖಾ ಟೀಂ ಪ್ರಕರಣದ ಸಾಕ್ಷ್ಯ ಸಂಗ್ರಹ ನಡೆಸುತ್ತಿದೆ. ವಿದ್ಯಾರ್ಥಿಗಳು ನೇತ್ರಾ ಜ್ಯೋತಿ ಕಾಲೇಜು ಆಡಳಿತ ಮಂಡಳಿಗೆ ಬರೆದುಕೊಟ್ಟ ತಪ್ಪೊಪ್ಪಿಗೆ ಪತ್ರ, ಮಲ್ಪೆ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ, ಕುಂದಾಪುರ ಸರ್ಕಲ್ ಇನ್ಸ್ ಪೆಕ್ಟರ್ ಬೆಳ್ಳಿಯಪ್ಪ ದಾಖಲಿಸಿದ ಹೇಳಿಕೆಗಳ ಪ್ರತಿಯನ್ನು ಸಿಐಡಿ ಪಡೆದುಕೊಂಡಿದೆ. ಇನ್ನು ಆರೋಪ ಹೊತ್ತ ಮೂವರು ವಿದ್ಯಾರ್ಥಿನಿಯರು(Students) ನಿರೀಕ್ಷಣಾ ಜಾಮೀನು ಪಡೆಯುವ ಸಂದರ್ಭ ಕೋರ್ಟ್ ಮುಂದೆ ಘಟನೆಯ ಬಗ್ಗೆ ವಿವರಿಸಿದ್ದರು. ಇನ್ನು ಇನ್ಸ್ಪೆಕ್ಟರ್ ಬೆಳ್ಳಿಯಪ್ಪ ಸಂತ್ರಸ್ತ ವಿದ್ಯಾರ್ಥಿನಿ ಹೇಳಿಕೆಯನ್ನು ಕೋರ್ಟ್ ಮುಂದೆ ದಾಖಲು ಮಾಡಿದ್ದರು. ಈ ಎಲ್ಲಾ ಹೇಳಿಕೆಯ ದಾಖಲೆ ಪ್ರತಿಗಳನ್ನು ಸಿಐಡಿ(CID) ಪಡೆದುಕೊಂಡಿದೆ. ಚಿತ್ರೀಕರಣ ಮಾಡಿರೋದು ಹೌದು, ಅದನ್ನು ಡಿಲೀಟ್ ಮಾಡಿರೋದು ಹೌದು ಎಂದು ದಾಖಲೆ ಮೂಲಕ ಹೇಳಿರುವುದು ಕೂಡಾ ಪ್ರಮುಖ ಸಾಕ್ಷಿಯಾಗಲಿದೆ. ಖುದ್ದು ಸಿಐಡಿ ಎಡಿಜಿಪಿ ಮನೀಶ್ ಪ್ರಕರಣದ ತನಿಖಾ ಪ್ರಗತಿಯ ಮಾಹಿತಿ ಪಡೆದಿದ್ದಾರೆ. ಲೇಡಿಸ್ ಟಾಯ್ಲೆಟ್‌ನಲ್ಲಿ(Ladies toilet) ಹಿಂದು ವಿದ್ಯಾರ್ಥಿನಿಯ ವಿಡಿಯೋ(Hindu girls video case) ಚಿತ್ರೀಕರಣದ ಸ್ಪಷ್ಟತೆ ಪಡೆಯಲು ಸಿಐಡಿ ತನಿಖಾ ಟೀಂ ಘಟನೆಯ ಮರುಸೃಷ್ಟಿಗೆ ಮುಂದಾಗಿದೆ. ಆಳೆತ್ತರದ ಗೊಂಬೆಯನ್ನು ತಂದು ಟಾಯ್ಲೆಟ್ನ ಒಳಗಿರಿಸಿ, ಫೋಟೋ ತೆಗೆಸಿ ಕ್ರಾಸ್ ಚೆಕ್ ಮಾಡಿದ್ದಾರೆ. ಈ ಮೂಲಕ ಜುಲೈ 18 ರಂದು ನಡೆದ ಘಟನೆಯ ಮರು ಸೃಷ್ಟಿ ಮಾಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಅಥ್ಲೆಟಿಕ್ ಆಟಗಾರ ಇಂದು ಕೋಟಿ ರೂಪಾಯಿ ಒಡೆಯ‌: ಕೋಟೆನಾಡ ಜನರ ಮನಗೆದ್ದ ಯುವ ಉದ್ಯಮಿ !

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!