May 24, 2024, 5:31 PM IST
ಬೆಂಗಳೂರಿನ ಹೊರವಲಯದ ಫಾರ್ಮ್ ಹೌಸ್ನಲ್ಲಿ ಬರ್ತ್ ಡೇ(Birthday) ಹೆಸರಿನಲ್ಲಿ ರೇವ್ ಪಾರ್ಟಿಯೊಂದು(Rave Party) ನಡೆದಿದೆ. ಈ ವೇಳೆ ಸಿಸಿಬಿ(CCB) ಕೈಯಲ್ಲಿ ಕೆಲವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಜಿ.ಆರ್.ಫಾರ್ಮ್ ಹೌಸ್ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿದ್ದ ಇಬ್ಬರು ನಟಿಯರು ಸೇರಿದಂತೆ 100ಕ್ಕೂ ಹೆಚ್ಚಿನ ಮಂದಿಯನ್ನು ಸಿಸಿಬಿ ವೈದ್ಯಕೀಯ ತಪಾಸಣೆಗೊಳಪಡಿಸಿತ್ತು. ಈಗ ವೈದ್ಯಕೀಯ ವರದಿ ಸಿಸಿಬಿಗೆ ಸಲ್ಲಿಕೆಯಾಗಿದ್ದು, ಇದರಲ್ಲಿ 101 ಮಂದಿ ಪೈಕಿ 86 ಜನರು ಮಾದಕ ವಸ್ತು ಸೇವನೆ ಖಚಿತವಾಗಿದೆ ಎಂದು ಗೊತ್ತಾಗಿದೆ.
ಇದನ್ನೂ ವೀಕ್ಷಿಸಿ: ಜೂನ್ 4ರ ನಂತರ ಕಾಂಗ್ರೆಸ್ನಲ್ಲಿ ಬದಲಾವಣೆ ಆಗುತ್ತಾ? ಡಿಕೆಶಿಯ ಈ ಮಾತಿನಲ್ಲೂ ಇದೆಯಾ ಸಂದೇಶ..?