ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹೆಚ್ಚಾದ ಸೈಬರ್ ಅಪರಾಧ: ದಿನಕ್ಕೊಂದು ವರಸೆ, ಮೋಸ..ಕ್ರಿಮಿನಲ್‌ಗಳ ನಾನಾ ವೇಷ!

ಹುಬ್ಬಳ್ಳಿ ಧಾರವಾಡ ನಗರದಲ್ಲಿ ಹೆಚ್ಚಾದ ಸೈಬರ್ ಅಪರಾಧ: ದಿನಕ್ಕೊಂದು ವರಸೆ, ಮೋಸ..ಕ್ರಿಮಿನಲ್‌ಗಳ ನಾನಾ ವೇಷ!

Published : Jul 19, 2024, 03:11 PM IST

ಮೂವರು ವ್ಯಕ್ತಿಗಳಿಗೆ ಹುಬ್ಬಳ್ಳಿಯಲ್ಲಿ  1.4 ಕೋಟಿ ರೂಪಾಯಿ ವಂಚನೆ 
ಕ್ರಿಪ್ಪೋ ಕರೆನ್ಸಿ ಖರೀದಿ ಮಾಡಿದ್ರೆ ಲಾಭ ಪಡೆಯಬಹುದೆಂದು ವಂಚನೆ 
ಹುಬ್ಬಳ್ಳಿ ಉದ್ಯಮಿ ಶಿವಾನಂದ ಪಾವಸ್ಕರ್ , ಇಬ್ಬರು ಸ್ನೇಹಿತರಿಗೆ ವಂಚನೆ
 

ಹುಬ್ಬಳ್ಳಿ-ಧಾರವಾಡ (Hubli-Dharwad)ನಗರದಲ್ಲಿ ಸೈಬರ್‌ ಅಪರಾಧಗಳು(Cyber ​​crimes) ಹೆಚ್ಚಾಗುತ್ತಿದ್ದು, ದಿನಕ್ಕೊಂದು ವರಸೆ, ಮೋಸವನ್ನು ಕ್ರಿಮಿನಲ್‌ಗಳು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಜನ ಹಣ ಕಳೆದುಕೊಳ್ಳುತ್ತಲೇ ಇದ್ದಾರೆ. ಕ್ರಿಪ್ಪೋ ಕರೆನ್ಸಿ(Crypto currency) ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ. ಮೂವರು ವ್ಯಕ್ತಿಗಳಿಗೆ ಬರೋಬ್ಬರಿ 1.4 ಕೋಟಿ ರೂ. ವಂಚನೆ ಮಾಡಲಾಗಿದೆ. ಕ್ರಿಪ್ಪೋ ಕರೆನ್ಸಿ ಖರೀದಿಸಿದ್ರೆ ಹೆಚ್ಚಿನ ಲಾಭ ಪಡೆಯಬಹುದೆಂದು ವಂಚನೆ ಮಾಡಲಾಗಿದೆ. ಹುಬ್ಬಳ್ಳಿ(Hubli) ಉದ್ಯಮಿ ಶಿವಾನಂದ ಪಾವಸ್ಕರ್ ಹಾಗೂ ಇಬ್ಬರು ಸ್ನೇಹಿತರಿಗೆ ವಂಚನೆ ಮಾಡಲಾಗಿದ್ದು, ಗೋಕುಲ ರಸ್ತೆಯ ಶಿವಾನಂದ, ಪ್ರವೀಣ ಕುಲಕರ್ಣಿ, ಸುಜೀತ್ ಕಲಬುರ್ಗಿಗೆ  ವಂಚನೆ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ಕ್ರಿಪ್ಲೋ ಕರೆನ್ಸಿ ಜಾಹೀರಾತು ನೋಡಿ ವ್ಯಕ್ತಿಗಳು ಮೋಸ ಹೋಗಿದ್ದಾರೆ. ಫೇಸ್‌ ಬುಕ್‌ನಲ್ಲಿದ್ದ ನಂಬ‌ರ್ ಮೂಲಕ ಛಾಯಾಸಿಂಗ್ ಎಂಬ ವ್ಯಕ್ತಿಯ ಪರಿಚಯವಾಗಿದ್ದು, ವೆಬ್‌ಸೈಟ್‌ಗಳ ಲಿಂಕ್ ಕಳಿಸಿ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಲು ಸೂಚನೆ ನೀಡಲಾಗಿದೆ. ಇದನ್ನು ನಂಬಿದ ಮೂವರಿಂದಲೂ ಲಿಂಕ್ ಇನ್‌ಸ್ಟಾಲ್ ಮಾಡಲಾಗಿದೆ. ಮೂವರ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಲಾಗಿದೆ. ಶಿವಾನಂದ ಖಾತೆಯಿಂದ 68.99 ಲಕ್ಷ ರೂ., ಸುಜಿತ್ ಖಾತೆಯಿಂದ 14.85 ಲಕ್ಷ, ಪ್ರವೀಣ್ ಕುಲಕರ್ಣಿ ಖಾತೆಯಿಂದ 21.5 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ನಟ ದರ್ಶನ್‌ಗೆ ಜೈಲಲ್ಲಿ ಊಟ ಸೇರ್ತಿಲ್ವಾ..? ನಿದ್ರೆ ಬರ್ತಿಲ್ವಾ..? ಪೊಲೀಸರ ಆಕ್ಷೇಪಣೆಯಲ್ಲಿ ಏನಿದೆ..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more