ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!

ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!

Published : Sep 20, 2025, 02:05 PM IST

ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್​​ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು.

ಅವರಿಬ್ಬರು ಮದುವೆಯಾಗಿ ಎರಡುವರೆ ವರ್ಷವಾಗಿದೆ ಅಷ್ಟೇ.. ಒಂದು ಮುದ್ದಾದ ಹೆಣ್ಣುಮಗು ಕೂಡ ಇದೆ.. ಆದ್ರೆ ವರ್ಷದ ಹಿಂದೆ ಗಂಡ ಟಾರ್ಚರ್​​ ಕೊಡ್ತಾನೆ ಅಂತ ಹೆಂಡತಿ ಗಂಡ ಮತ್ತು ಮಗುವನ್ನ ಬಿಟ್ಟು ತವರು ಮನೆ ಸೇರಿದ್ಲು. ಗಂಡ ಕೆಲಸವನ್ನೂ ಮಾಡಿಕೊಂಡು ಮಗುವನ್ನೂ ನೋಡಿಕೊಳ್ತಿದ್ದ.. ಆದ್ರೆ ಮೊನ್ನೆ ಇದ್ದಕ್ಕಿದ್ದಂತೆ ಆತ ಮಚ್ಚು ಹಿಡಿದು ಹೆಂಡತಿ ಮನೆ ಎದುರು ಬಂದು ನಿಂತಿದ್ದ.. ಇವತ್ತು ಏನೇ ಆಗಲಿ ಹೆಂಡತಿಯನ್ನ ಕತ್ತರಿಸಬೇಕು ಅಂತ ಅಂದುಕೊಂಡಿದ್ದ.. ಆದ್ರೆ ಅಷ್ಟರಲ್ಲೇ ಪೊಲೀಸರು ಸ್ಪಾಟ್​ಗೆ ಬಂದು ಆತನನ್ನ ಅರೆಸ್ಟ್​ ಮಾಡಿದ್ರು.. ಬಟ್​​ ಆತ ಹೆಂಡತಿಯನ್ನ ಮುಗಿಸಲು ಬರುವ ಮೊದಲೇ ಒಂದು ಹೆಣ ಹಾಕಿ ಬಂದಿದ್ದ..

ಅಷ್ಟಕ್ಕೂ ಆತ ಕೊಂದಿದ್ದು ಯಾರನ್ನ..? ಹೆಂಡತಿಯನ್ನೇ ಮುಗಿಸೋ ನಿರ್ಧಾರ ಮಾಡಿದ್ದೇಕೆ..? ಒಂದು ಡೆಡ್ಲಿ ಮರ್ಡರ್​​ ಹಿಂದಿನ ಕಹನಿಯೇ ಇವತ್ತಿನ ಎಫ್​​ಐಆರ್​​. ಅಷ್ಟೇ ಅಲ್ಲಿಗೆ ಮಹಾಂತೇಶನ ಕಥೆ ಮುಗಿಯುತ್ತೆ... ಆದ್ರೆ ಇಷ್ಟಕ್ಕೇ ಬಸವರಾಜನ ದ್ವೇಷದ ಕಿಚ್ಚು ಹಾರೋದಿಲ್ಲ.. ಆತನ ತಲೆಗೆ ಮತ್ತೊಂದು ಮರ್ಡರ್​​ ಮಾಡೊ ಯೋಚನೆ ಬಂದುಬಿಡುತ್ತೆ. ಅದು ಯಾರದ್ದು ಗೊತ್ತಾ..? ತಾನು ತಾಳಿ ಕಟ್ಟಿದ ಹೆಂಡತಿಯದ್ದು.. ಹಾಗಾದ್ರೆ ಅವಳ ಕಥೆಯನ್ನೂ ಬಸವರಾಜ ಮುಗಿಸಿಬಿಟ್ಟನಾ..? ಮಹಾಂತೇಶ ಮರ್ಡರ್​ ಆದ ಮೇಲೆ ಅಲ್ಲಿ ಏನೇನಾಯ್ತು..? ಪೊಲೀಸರ ತನಿಖೆ ಹೇಗಿತ್ತು..? ಊರಿನವರ ಮಾತು ಕೇಳಿಕೊಂಡು ಮಹಾಂತಶನ ವಿರುದ್ಧ ಹಾಕಿದ್ದ ಕೇಸನ್ನ ಬಸವರಾಜ ವಾಪಸ್​​​ ತಗೆದುಕೊಂಡಿದ್ದ..

ಆದ್ರೆ ನಂತರ ಹೆಂಡತಿ ದೂರವಾಗ್ತಾಳೆ.. ಮತ್ತೆ ಮಹಾಂತೇಶನ ಸಹವಾಸ ಮಾಡ್ತಾಳೆ.. ಇದು ಬಸವರಾಜನ ಪಿತ್ತ ನೆತ್ತಿಗೇರುತ್ತೆ.. ಮಹಾಂತೇಶನಿಗೆ ಮುಹೂರ್ತ ಇಟ್ಟೇಬಿಡ್ತಾನೆ.. ಪಕ್ಕಾ ಪ್ಲಾನ್​ ಮಾಡಿ ಅವನನ್ನ ಎತ್ತೇಬಿಡ್ತಾನೆ.. ಆದರೆ ಬಳಿಕ ಹೆಂಡತಿಯನ್ನೂ ಮುಗಿಸಿಬಿಡೋ ತೀರ್ಮಾನ ಮಾಡಿ ಆಕೆಯ ಮನೆ ಬಳಿ ಹೋಗ್ತಾನೆ.. ಆದ್ರೆ ಇನ್ನೇನು ಹೆಂಡತಿಯ ಕಥೆ ಮುಗಿಸಬೇಕು ಅಷ್ಟರಲ್ಲೇ ಪೊಲೀಸರು ಅವನ ಎದುರು ಹೋಗಿ ನಿಲ್ತಾರೆ. ಮಹಾಂತೇಶ ತಪ್ಪು ಮಾಡಿರಬಹುದು, ಆದರೆ ಕೊಲೆ ಮಾಡುವ ಹಂತಕ್ಕೆ ಬಸವರಾಜ್ ಹೋಗಬಾರದಿತ್ತು.. ಅನೈತಿಕ ಸಂಬಂಧದ ಜ್ವಾಲೆ ಇದೀಗ ಎರಡು ಕುಟುಂಬಗಳನ್ನೇ ಬಲಿ ಪಡೆದಿವೆ.

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more