Murder: ತಾಯಿಯನ್ನ ಕೊಂದು ಠಾಣೆಗೆ ಬಂದು ಶರಣಾದ ಮಗ..! ಊಟ ಹಾಕಲ್ಲ ಎಂದಿದ್ದಕ್ಕೆ ಉಸಿರೇ ನಿಲ್ಲಿಸಿದ ಪಾಪಿ ಪುತ್ರ !

Feb 2, 2024, 12:58 PM IST

ತಾಯಿಯನ್ನು ಕೊಂದು ಮಗ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಕೆ ಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿ ನೇತ್ರಾಳನ್ನ ರಾಡ್‌ನಿಂದ ಹೊಡೆದು ಮಗ ಕೊಲೆ(Murder) ಮಾಡಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಪವನ್‌ ಡಿಪ್ಲೋಮಾ ಓದುತ್ತಿದ್ದು, ಬೆಳಗ್ಗೆ ಕಾಲೇಜಿಗೆ ರೆಡಿ ಆಗುವಾಗ ತಾಯಿಗೆ(Mother) ಊಟ ಬಡಿಸಲು ಹೇಳಿದ್ದಾನೆ. ಈ ವೇಳೆ ಮಗನಿಗೆ ಬೈದಿದ್ದ ತಾಯಿ ನೇತ್ರಾ, ನೀನು ನನ್ನ ಮಗನೇ(Son) ಅಲ್ಲ..ನಿನಗೆ ಊಟ ಹಾಕಲ್ಲ ಎಂದಿದ್ದಾರೆ. ಅಷ್ಟಕ್ಕೇ ಕೋಪಗೊಂಡು ತಾಯಿಯ ತಲೆಗೆ ರಾಡ್‌ನಿಂದ ಪವನ್‌ ಹೊಡೆದಿದ್ದಾನೆ. ಪರಿಣಾಮ ತೀವ್ರ ಗಾಯಗೊಂಡು ನೇತ್ರಾ ಮೃತಪಟ್ಟಿದ್ದಾರೆ. ಕೊಲೆ ಮಾಡಿ ಸೀದಾ ಠಾಣೆಗೆ ಹೋಗಿ ಪವನ್ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನ ವಶಪಡೆದು ಪೊಲೀಸರು(Police) ವಿಚಾರಣೆ ನಡೆಸುತ್ತಿದ್ದಾರೆ. ಕೆ ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ: KS Eshwarappa: ಡಿ.ಕೆ. ಸುರೇಶ್‌ ರಸ್ತೆಯಲ್ಲಿ ಹೋಗುವ ದಾಸಪ್ಪನಂತೆ ಮಾತನಾಡಿದ್ರೆ ಹೇಗೆ? ಕೆ.ಎಸ್‌.ಈಶ್ವರಪ್ಪ