Divya Vasanth absconds: ರೋಲ್‌ಕಾಲ್ ಪತ್ರಕರ್ತರ ಡೀಲ್ ಕಹಾನಿ..! ರಾಜ್ಯವೇ ಖುಷಿ ಪಡೋ ಸುದ್ದಿ ಕೊಟ್ಟವಳು ನಾಪತ್ತೆ..!

Divya Vasanth absconds: ರೋಲ್‌ಕಾಲ್ ಪತ್ರಕರ್ತರ ಡೀಲ್ ಕಹಾನಿ..! ರಾಜ್ಯವೇ ಖುಷಿ ಪಡೋ ಸುದ್ದಿ ಕೊಟ್ಟವಳು ನಾಪತ್ತೆ..!

Published : Jul 07, 2024, 05:06 PM IST

ಇಬ್ಬರು ಅಂದರ್.. ಇನ್ನಿಬ್ಬರು ಅಪ್ಸ್ಕಾಂಡ್..!
ಈ ಗ್ಯಾಂಗ್ ವರ್ಕ್ ಮಾಡ್ತಿದ್ದಿದ್ದು ಹೇಗೆ ಗೊತ್ತಾ..?
ವಾಟ್ಸಪ್ ಗ್ರೂಪ್‌ನಿಂದ ಬಯಲಾಯ್ತು ದಂಧೆ..!

ಅವಳು ಖಾಸಗಿ ಸುದ್ದಿ ವಾಹಿನಿಯ ಆ್ಯಂಕರ್ ( Private news channel anchor )ಆಗಿದ್ದವಳು. ನಟಿಯೊಬ್ಬರು ಗರ್ಭಿಣಿಯಾದ ಸುದ್ದಿಯನ್ನ ರಾಜ್ಯವೇ ಖುಷಿ ಪಡೋ ಸುದ್ದಿ ಅಂತ ಹೇಳಿ ಟ್ರೋಲ್ ಆದವಳು. ನಾವು ಮಾತನ್ನಾಡ್ತೀರೋದು ದಿವ್ಯಾ ವಸಂತಳ(Divya Vasanth) ಬಗ್ಗೆ. ಒಂದೇ ಡೈಲಾಗ್‌ನಲ್ಲಿ ಫೇಮಸ್‌ಗಿರಿ ಪಡೆದು ನಂತರ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಅಭಿಮಾನಿ ಬಳಗವನ್ನ ಕಟ್ಟಿಕೊಂಡಿದ್ದ ಈ ಚೆಲುವೆ ಇವತ್ತು ಮತ್ತೆ ಸುದ್ದಿಯಾಗಿದ್ದಾಳೆ. ಆದ್ರೆ ಈ ಬಾರಿ ಮಾಡಬಾರದನ್ನ ಮಾಡಿ.. ತನ್ನದೇ ಆದ ಒಂದು ಪಟಾಲಂ ಅನ್ನ ಕಟ್ಟಿಕೊಂಡಿದ್ದ ಈ ರೋಲ್‌ಕಾಲ್‌ ಪತ್ರಕರ್ತೆ ಸಿಕ್ಕಸಿಕ್ಕವರಿಗೆಲ್ಲಾ ಬ್ಲ್ಯಾಕ್‌ಮೇಲ್ ಮಾಡಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದಳು. ಆದ್ರೆ ಇವತ್ತು ಇದೇ ದಿವ್ಯಾ ವಸಂತ ಸರಿಯಾಗಿ ಲಾಕ್ ಆಗಿದ್ದಾಳೆ. ದಿವ್ಯಾ ವಸಂತ ಈಗ ನಾಪತ್ತೆಯಾಗಿದ್ದಾಳೆ. ಯಾವುದೇ ಕ್ಷಣದಲ್ಲಾದ್ರೂ ಈಕೆ ಪೊಲೀಸರ ಕೈಗೆ ತಗ್ಲಾಕಿಕೊಳ್ಳಬಹುದು. ಅದೊಂದು ಪಕ್ಕಾ ರೋಲ್‌ಕಾಲ್ ಗ್ಯಾಂಗ್. ತಾವೇ ಸ್ಪಾ ಒಂದಕ್ಕೆ ಹುಡುಗಿಯನ್ನ ಕೆಲಸಕ್ಕೆ ಸೇರಿಸುತ್ತಾರೆ. ನಂತರ ತಮ್ಮ ಗ್ಯಾಂಗ್‌ನವರೇ ಮಸಾಜ್ ಮಾಡಿಸಬೇಕು ಅಂತ ಕಸ್ಟಮರ್ ರೀತಿ ಸ್ಪಾಗೆ ಎಂಟ್ರಿ ಕೊಡ್ತಾರೆ. ನಂತರ ಮಸಾಜ್ ಮಾಡಿಸುವ ನೆಪದಲ್ಲಿ ರೂಮ್ ಒಳಗೆ ತಮ್ಮದೇ ಹುಡುಗಿಯ ಜೊತೆ ತಾವೇ ನಗ್ನವಾಗಿ ಚಿತ್ರಿಸಿಕೊಂಡು ನಂತರ ಅದೇ ವಿಡಿಯೋವನ್ನ ಇಟ್ಟುಕೊಂಡು ಸ್ಪಾನ ಮ್ಯಾನೇಜರ್‌ಗೆ ಬ್ಲ್ಯಾಕ್ ಮೇಲ್(Indiranagar spa extortion case) ಮಾಡೋಕೆ ಶುರು ಮಾಡ್ತಾರೆ. ಆದ್ರೆ ಎಷ್ಟು ದಿನ ಅಂತ ಈ ಆಟಗಳು ನಡೆಯುತ್ತೆ ಇವತ್ತು ಇದೇ ರೀತಿ ಒಂದು ಸ್ಪಾಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಆದ್ರೆ ಆ ಸ್ಪಾನಾ ಮ್ಯಾನೇಜರ್ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ.

ಇದನ್ನೂ ವೀಕ್ಷಿಸಿ:  ದರ್ಶನ್ ಬೆನ್ನಿಗೆ ನಿಲ್ಲಲು ಆಪ್ತರು, ಕುಟುಂಬಸ್ಥರಿಂದ ಷರತ್ತು! ಕುಟುಂಬಸ್ಥರು ಹಾಕಿದ ಕಂಡೀಷನ್‌ ಏನು ?

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?