ದರ್ಶನ್ ಬೆನ್ನಿಗೆ ನಿಲ್ಲಲು ಆಪ್ತರು, ಕುಟುಂಬಸ್ಥರಿಂದ ಷರತ್ತು! ಕುಟುಂಬಸ್ಥರು ಹಾಕಿದ ಕಂಡೀಷನ್ ಏನು ?
ಪ್ರಭಾವಿ ರಾಜಕಾರಣಿ ಮನೆಯಲ್ಲಿ ಕಂಡೀಷನ್ ಮೀಟಿಂಗ್
ಜೈಲಲ್ಲಿರೋ ದರ್ಶನ್ ಜತೆ ಆಪ್ತರಿಂದ ಸಂಧಾನ ಮಾತುಕತೆ
ಪವಿತ್ರಾಳನ್ನ ಬಿಟ್ರೆ ಕಾನೂನು ಹೋರಾಟ ಎಂದು ಮನವರಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನಟ ದರ್ಶನ್(Darshan) ಈಗಾಗಲೇ ಜೈಲು ಸೇರಿದ್ದಾಗಿದೆ. ಇದೀಗ ದರ್ಶನ್ ಉಳಿಸಲು 2ನೇ ಸುತ್ತಿನ ಪ್ರಯತ್ನ ಶುರುವಾಗಿದೆ. ದರ್ಶನ್ ಬಚಾವ್‌ಗೆ ಹೈವೋಲ್ಟೇಜ್ ಸಭೆಯನ್ನು ಪ್ರಭಾವಿಗಳು ನಡೆಸಿದ್ದಾರೆ. ದರ್ಶನ್ ಉಳಿಸಲು ಅಖಾಡಕ್ಕಿಳಿದ ಆಪ್ತರು, ರಾಜಕಾರಣಿಗಳು, ಕುಟುಂಬಸ್ಥರು. A2 ಆರೋಪಿ ದರ್ಶನ್‌ಗೆ ಕುಟುಂಬಸ್ಥರು(Family members), ಆಪ್ತರ ಷರತ್ತು ಏನು? ಪವಿತ್ರಾಳನ್ನ ಬಿಟ್ಟು ಬಂದ್ರೆ ಬೆಂಬಲ ಎಂದ ಕುಟುಂಬಸ್ಥರು. ನೀವು ಹೇಳಿದಂತೆ ಕೇಳ್ತೀನಿ, ಹೇಗಾದರೂ ಮಾಡಿ ಬಚಾವ್ ಮಾಡಿ ಎಂದು ದರ್ಶನ್ ಹೇಳಿದ್ದಾರೆ. ಪವಿತ್ರಾ ಸಹವಾಸ ಬಿಟ್ಟರೆ ಕಾನೂನು ಹೋರಾಟ ಎಂಬ ಷರತ್ತು. ಪವಿತ್ರಾ ಗೌಡಳನ್ನ(Pavitra gowda) ಬಿಟ್ಟು ಬಂದ್ರೆ ಮಾತ್ರ ಬೆಂಬಲ ಎಂದು ಆಪ್ತರು ಹೇಳಿದ್ದಾರಂತೆ. ಪವಿತ್ರಾ ಸಹವಾಸ ಬಿಟ್ಟು ವಿಜಯಲಕ್ಷ್ಮಿ ಜತೆಯಲ್ಲಿರಬೇಕು. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಕಂಡೀಷನ್ ಹಾಕಲಾಗಿದೆಯಂತೆ. ಕುಟುಂಬಸ್ಥರು, ಆಪ್ತರ ಷರತ್ತಿಗೆ ದರ್ಶನ್ ಒಪ್ಪಿದ್ದಾರಂತೆ ಎಂದು ತಿಳಿದುಬಂದಿದೆ. ದರ್ಶನ್ ಒಪ್ಪಿಕೊಳ್ತಿದ್ದಂತೆ ಲಾಯರ್ ನೇಮಕಕ್ಕೆ ಪ್ಲ್ಯಾನ್ ಮಾಡಿದ್ದು, ಪವಿತ್ರಾಳನ್ನ ಬಿಟ್ಟರೆ ಮಾತ್ರ ಬೆಂಬಲ ಎಂದು ಆಪ್ತರು ನಿರ್ಧರಿಸಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜಕೀಯ ನೆಲೆ ನೀಡಿದ ಶಿಗ್ಗಾಂವಿ ಉಳಿಸಿಕೊಳ್ಳಲು ಬೊಮ್ಮಾಯಿ ಪ್ಲ್ಯಾನ್: ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ನಡೆಸಲು ಸಿದ್ಧತೆ