ಅನ್ನ ಕೊಟ್ಟವಳ ಕತ್ತು ಸೀಳಿದ ಕಾರ್ ಡ್ರೈವರ್..! ಕೊಲೆ ಮಾಡಿ ತಪ್ಪು ಕಾಣಿಕೆ ಹಾಕಿದ್ದ ಹಂತಕ..!

ಅನ್ನ ಕೊಟ್ಟವಳ ಕತ್ತು ಸೀಳಿದ ಕಾರ್ ಡ್ರೈವರ್..! ಕೊಲೆ ಮಾಡಿ ತಪ್ಪು ಕಾಣಿಕೆ ಹಾಕಿದ್ದ ಹಂತಕ..!

Published : Nov 07, 2023, 03:57 PM IST

ತಿಂಗಳ ಹಿಂದೆ ಕಿರಣ್‌ನನ್ನು ಕೆಲಸದಿಂದ ತೆಗೆದಿದ್ದ ಪ್ರತಿಮಾ
ಕೊಲೆ ಮಾಡಿ ಚಾಮರಾಜನಗರಕ್ಕೆ ಎಸ್ಕೇಪ್ ಆಗಿದ್ದ ಕಿರಣ್..!
ಕೆಲಸ ಸರಿಯಾಗಿ ಮಾಡದ ಕಾರಣಕ್ಕೆ ಬೈಸಿಕೊಳ್ಳುತ್ತಿದ್ದ ಕಿರಣ್

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖಡಕ್ ಆಫೀಸರ್ ಅಂತಲೇ ಹೆಸರು ಮಾಡಿದ್ದ ಪ್ರತಿಮಾ ಕೊಲೆ(Murder) ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿದೆ. ಖಡಕ್ ಲೇಡಿ ತನ್ನ ಮನೆಯಲ್ಲೇ ಬರ್ಬರವಾಗಿ ಕೊಲೆಯಾಗಿ ಹೋದಾಗ ಆ ಕೊಲೆಗೆ ನಾನಾ ಕಾರಣಗಳು ಕೇಳಿ ಬಂದಿತ್ತು. ಅಂತೆ ಕಂತೆಗಳು ಹುಟ್ಟಿಕೊಂಡಿದ್ವು. ಆದ್ರೆ ತನಿಖೆ ನಡೆಸುತ್ತಿದ್ದ ಪೊಲೀಸರು(police) ಕೊನೆಗೂ ಕೊಲೆಗಾರನ ಹೆಡೆಮುರಿ ಕಟ್ಟಿದ್ದಾರೆ. ಪ್ರತಿಮಾ(Pratima) ಕಥೆ ಮುಗಿಸಿ ದೇವರಿಗೆ ತಪ್ಪು ಕಾಣಿಕೆ ಹಾಕಲು ಹೊರಟವನಿಗೆ ಜೈಲಿನ ದರ್ಶನ ಮಾಡಿಸಿದ್ದಾರೆ ಪೊಲೀಸರು. ಯಾವಾಗ ಪ್ರತಿಮಾರ ಮಾಜಿ ಕಾರ್ ಡ್ರೈವರ್ ಫೋನ್ ಸ್ವಿಚ್ ಆಫ್ ಅಂತ ಬಂತೋ ಪೊಲೀಸರಿಗೆ ಅವನೇ ಕೊಲೆಗಾರ ಅನ್ನೋದು ಕನ್ಫರ್ಮ್ ಆಗುತ್ತೆ. ಆದ್ರೆ ಆತ ಮಾತ್ರ ನಾಟ್ ರೀಚಬಲ್.ಆದ್ರೂ ಬೆಂಬಿಡದ ಪೊಲೀಸರು ಅವನನ್ನ ಕೊನೆಗೂ ಅರೆಸ್ಟ್ ಮಾಡಿದ್ದಾರೆ. ಅವನು ಪ್ರತಿಮಾರ ಬಳಿ 4 ವರ್ಷದಿಂದ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಆದ್ರೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ರೂ ಎಲ್ಲರ ಬಳಿ ಸರ್ಕಾರಿ ಕೆಲಸದಲ್ಲಿ ಇರೋದಾಗಿ ಹೆಳಿಕೊಂಡಿದ್ದ. ಇನ್ನೂ ಹೆಂಡತಿಗೂ ಇದೇ ರೀತಿ ಹೇಳಿ ನಂಬಿಸಿದ್ದ. ಆದ್ರೆ ಇಷ್ಟಕ್ಕೆ ಕಿರಣ ಸುಮ್ಮನ್ನಾಗಿದ್ದಿದ್ರೆ ಏನೂ ಆಗ್ತಿರಲಿಲ್ಲ. ಪ್ರತಿಮಾರ ಕೆಲಸಗಳಲ್ಲೂ ಮೂಗು ತೂರಿಸುತ್ತಿದ್ದ. ಇಲಾಖೆಯ ಮಾಹಿತಿಗಳನ್ನ ಲೀಕ್ ಮಾಡ್ತಿದ್ದ. ಇದರ ಬಗ್ಗೆ ಗೊತ್ತಾದ ಪ್ರತಿಮಾ ಆತನಿಗೆ ವಾರ್ನಿಂಗ್ ಕೂಡ ಕೊಟ್ಟಿದ್ರು. ಆದ್ರೆ ಇದ್ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದ ಕಿರಣ ಮಾತ್ರ ತನ್ನ ಆಟಗಳನ್ನ ಮುಂದುವರೆಸಿದ್ದ. ಆದ್ರೆ ಆವತ್ತೊಂದು ದಿನ ಪ್ರತಿಮಾ ತಾಳ್ಮೆಯ ಕಟ್ಟೆ ಹೊಡೆದಿತ್ತು. ಕಿರಣನನ್ನ ಕೆಲಸದಿಂದ ಕಿತ್ತು ಹಾಕಿದ್ರು. ಅಷ್ಟೇ ಆವತ್ತೇ ಕಿರಣ ಸೇಡಿನ ಶಪಥ ಮಾಡಿದ್ದ. ಸದ್ಯ ಕಿರಣ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ.. ಈಗ ಆತ ಕೆಲಸದಿಂದ ತೆಗೆದಿದ್ದಕ್ಕೇ ಕೊಲೆ ಮಾಡಿದ್ದೀನಿ ಅಂತ ಹೆಳಿಕೊಂಡಿದ್ದಾನೆ. ಆದ್ರೆ ಕೇವಲ ಇದೊಂದೇ ವಿಷ್ಯಕ್ಕೆ ಆತ ಕೊಲೆ ಮಾಡಿರೋದಕ್ಕೆ ಸಾಧ್ಯವಿಲ್ಲ ಅಂತಿದ್ದಾರೆ ಪೊಲೀಸರು. ಇದೇ ಕಾರಣಕ್ಕೆ ಪೊಲೀಸರು 10 ದಿನ ತಮ್ಮ ಕಸ್ಟಡಿಗೆ ಕಿರಣನನ್ನ ಪಡೆದುಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ Vs ಸಿದ್ದು ಕಾಳಗ: ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲವೆಂದ ಪ್ರಧಾನಿ

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more