Apr 28, 2024, 5:21 PM IST
ಅದು ಐತಿಹಾಸಿಕ ಬೆಂಗಳೂರು(Bengaluru) ಕರಗ. ಇದೇ ಕರಗದಲ್ಲಿ(Karaga) ಭಾಗಿಯಾಗಲು ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಮಂದಿ ಬರ್ತಾರೆ. ರಾತ್ರಿಯಿಡಿ ಉತ್ಸವದಲ್ಲಿ ಪಾಲ್ಗೊಂಡು, ಕರಗ ಸಾಗುವ ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿ ನಂತರ ಬೆಳಗಿನ ಜಾವ ತಮ್ಮ ಮನೆಗಳಿಗೆ ಮರಳುತ್ತಾರೆ. ಆದ್ರೆ ಮೊನ್ನೆ ನಡೆದ ಕರಗದಲ್ಲಿ ಭಾಗಿಯಾಗಲು ಬಂದಿದ್ದ ಅವನೊಬ್ಬ ಹೆಣವಾಗಿ ಬಿಟ್ಟಿದ್ದ. ಉತ್ಸವ ಮುಗಿಸಿ ಮನೆಗೆ ಹೋಗಿ ಮಲಗಿದವನು ಮೇಲೇಳಲೇ ಇಲ್ಲ. ಡ್ಯಾನ್ಸ್(Dance) ಮಾಡುವಾಗ ಕಾಲು ಟಚ್ ಆಯ್ತು ಅನ್ನೋ ಒಂದೇ ಕಾರಣಕ್ಕೆ ಸಾರದಿಯನ್ನ ಅಪ್ರಾಪ್ತರು ಕೊಂದು(Murder) ಮುಗಿಸಿದ್ದಾರೆ. ಇನ್ನೂ ಇದೇ ರೀತಿ ಇತ್ತಿಚೆಗೆ ಕಲಬುರಗಿಯಲ್ಲೂ(Kalaburagi) ನಡೆದಿದೆ. ಕಾಲು ತುಳಿದ ಅಂತ ಅವನನ್ನೇ ಮುಗಿಸಿಬಿಟ್ಟಿದ್ದಾನೆ. ಅಂದು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್‌ರವರ 133 ನೇ ಜಯಂತ್ಯೋತ್ಸವ(Ambedkar Jayanti) ಅಂಗವಾಗಿ ಇಡೀ ಕಲಬುರಗಿ ನಗರ ಸಂಭ್ರಮದಲ್ಲಿ ತೇಲಾಡುತ್ತಿತ್ತು. ಜಯಂತ್ಯೋತ್ಸವ ಹಿನ್ನಲೆ ಅನೇಕ ಕಡೆ ಭವ್ಯ ಮೆರವಣಿಗೆ ನಡೆಯುತ್ತಿದ್ದವು. ಆದರೆ ಅದೊಂದು ಸ್ಥಳದಲ್ಲಿ ಮಾತ್ರ ನೆತ್ತರು ಹರಿದಿತ್ತು. ಕೇವಲ ಕಾಲು ತುಳಿದ ಅನ್ನೋ ಕಾರಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
ಇದನ್ನೂ ವೀಕ್ಷಿಸಿ: HD Kumaraswamy: ಕಾನೂನು ಎಲ್ಲಾರಿಗೂ ಒಂದೇ ತಪ್ಪು ಮಾಡಿದ್ರೆ ಶಿಕ್ಷೆ ಆಗಲೇಬೇಕು : ಕುಮಾರಸ್ವಾಮಿ