Jun 5, 2024, 8:59 AM IST
ಭೀಮಾತೀರದ ಕುಖ್ಯಾತಿಯ ವಿಜಯಪುರ(Vijayapura) ಜಿಲ್ಲೆಯಲ್ಲಿ ಮರಳು ದಂಧೆ, ಕಂಟ್ರಿ ಪಿಸ್ತೂಲು ದಂಧೆ ಕಾಮನ್ ಅನ್ನೋ ಹಾಗೇ ಇತ್ತು. ಭೀಮಾತೀರದಲ್ಲಿ ಈ ದಂಧೆಗಳ ಸದ್ದಡಗಿತು ಅನ್ನೋವಾಗಲೇ ಈಗ ಮೀಟರ್ ಬಡ್ಡಿ ದಂಧೆ ಶುರುವಾಗಿದೆ. ಪರಿಣಾಮ ಹೆಣಗಳ ಮೇಲೆ ಹೆಣ ಬೀಳ್ತಿವೆ. ಕೊಟ್ಟವನು ಕೊಡಂಗಿ, ಇಸ್ಕಂಡವನು ವೀರಭದ್ರ ಅನ್ನೋಹಾಗೇ ಇಲ್ಲಿ ಬಡ್ಡಿ ದಂಧೆಗೆ(Meter baddi business) ಮಧ್ಯಸ್ಥಿಕೆ ವಹಿಸಿ ವಸೂಲಿಗೆ ಹೋದವನೇ ಹೆಣವಾಗಿದ್ದಾನೆ. ಹೀಗೆ ಮೀಟರ್ ಬಡ್ಡಿ ದಂಧೆಗೆ ಭೀಮಾ ತೀರದಲ್ಲಿ(Bhimatira) ಹೆಣವಾಗಿದ್ದಾನೆ. ರೋಹಿತ್ ಕೊಲೆಯಾದ 48 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯೋ ಖಾಕಿ ಪಡೆ ರೋಹಿತ್ ಕೊಲೆ ಯಾಕೆ ಮಾಡಿದ್ರಿ ಎಂದು ಆರೋಪಿಗಳನ್ನು ಪ್ರಶ್ನೆ ಮಾಡಿದ್ರು. ಆಗ ಅವರು ಕೊಟ್ಟ ಉತ್ತರ ಒಂದು ಕ್ಷಣ ಪೊಲೀಸರಿಗೂ ಶಾಕ್ ಆಗಿತ್ತು. ಹಣಕಾಸಿನ ವಿಚಾರಕ್ಕೆ ರೋಹಿತ್ ಪವಾರ್ ಕೊಲೆಯಾಗಿರಬಹುದು ಅಂತಾ ಪೊಲೀಸರು ಅನುಮಾನಿಸಿದ್ದರು. ಆದ್ರೆ ಹಂತಕರನ್ನ ಬಂಧಿಸಿ ವಿಚಾರಿಸಿದಾಗ ಹತ್ಯೆಯ ಹಿಂದಿನ ಬಡ್ಡಿ ದಂಧೆ ವ್ಯವಹಾರ ಬಯಲಿಗೆ ಬಿದ್ದಿತ್ತು. ಮೀಟರ್ ಬಡ್ಡಿ ವ್ಯವಹಾರದಲ್ಲಿ ರೋಹಿತ್ ಮಧ್ಯಸ್ಥಿಕೆವಹಿಸಿದ್ದ, ಬಡ್ಡಿ ವಸೂಲಿ, ಸಾಲ ವಸೂಲಿಗೆ ಮಧ್ಯಸ್ಥಿಕೆವಹಿಸಿದ್ದೆ ಆತನ ಅಂತ್ಯಕ್ಕೆ ಕಾರಣವಾಗಿಬಿಡ್ತು.. ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದ ರೋಹಿತ್ನನ್ನ ದುಡ್ಡು ಕೊಡ್ತೀನಿ ಅಂತ ಕರೆಸಿಕೊಂಡು ಬರ್ಬರವಾಗಿ ಕೊಂದು ಮುಗಿಸಿದ್ರು.
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಕೆಲಸದಲ್ಲಿ ಒತ್ತಡವಿರಲಿದೆ..