ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ: ಬೆಸ್ಟ್ ಫ್ರೆಂಡ್ ಕೊಲೆಗೆ ಕಾರಣ ಅವಳು..!

ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ: ಬೆಸ್ಟ್ ಫ್ರೆಂಡ್ ಕೊಲೆಗೆ ಕಾರಣ ಅವಳು..!

Published : Jun 25, 2023, 12:24 PM ISTUpdated : Jun 25, 2023, 12:26 PM IST

ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಟೆ ಕಟ್ಟಿದ್ರು..!
ರಾತ್ರಿ ಕೊಲೆ ಮಾಡಿ ಬೆಳಗ್ಗೆ ಏನೂ ಗೊತ್ತಿಲ್ಲ ಅಂದ್ರು..!
ಅವನ ಸುಳಿವು ಕೊಟ್ಟಿತ್ತು ಅವನದ್ದೇ ಮೊಬೈಲ್ ಫೋನ್..!

ಬೆಳಗಾವಿ: ಅವನು ಪೇಂಟರ್, ಹೆಂಡತಿ ಮತ್ತು ಇಬ್ಬರು ಮುದ್ದಾದ  ಮಕ್ಕಳು. ತಾನಾಯ್ತು ತನ್ನ ಕುಟುಂಬವಾಯ್ತು ಅಂತ ಇದ್ದವನು. ಆದ್ರೆ ಆವತ್ತು ಇದ್ದಕ್ಕಿದ್ದಂತೆ ಮಿಸ್ಸಿಂಗ್, ಮೊಬೈಲ್ ಮನೆಯಲ್ಲೇ ಇತ್ತು. ಹೆಂಡತಿ ಈಗ ಬರಬಹುದು ಆಗ ಬರಬಹುದು ಅಂತ ಕಾದಳು. ಆದ್ರೆ ಗಂಡನ ಸುಳಿವು ಮಾತ್ರ ಸಿಗಲೇ ಇಲ್ಲ.ಹೀಗೆ ದಿನಗಳೇ ಉರಳಿದವು. ಕಾಯೋವರೆಗೂ ಕಾದು ಹೆಂಡತಿನೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ಲು. ಇದೇ ಟೈಂನಲ್ಲಿ ಆತ ಬೇರೆ ಹೆಂಗಸಿನೊಂದಿಗೆ ಊರು ಬಿಟ್ಟಿದ್ದಾನೆ ಅನ್ನೋ ಸುದ್ದಿ ಹರಡಿತ್ತು. ಆದ್ರೆ ಹೀಗೆ ಸುದ್ದಿ ಹರಡಿಸಿದವರನ್ನೇ ಪೊಲೀಸರು ತಂದು ವಿಚಾರಣೆ ಮಾಡಿದ್ರು. ಆಗಲೇ ನೋಡಿ ನಾಪತ್ತೆಯಾದ ಪೇಂಟರ್‌ನ ಸುಳಿವು ಸಿಗೋದು. ರಮೇಶ ಕಾಣೆಯಾಗಿ ಇಂದಿಗೆ 3 ತಿಂಗಳು. ಆದ್ರೆ ಪ್ರಕರಣ ದಾಖಲಾಗಿದ್ದು, ಏಪ್ರಿಲ್ 5ನೇ ತಾರಿಖು. ಪೊಲೀಸರಿಗೆ ಈ ಕೇಸ್ನಲ್ಲಿ ಒಂದೇ ಒಂದು ಕ್ಲೂ ಕೂಡ ಸಿಕ್ಕಿರಲಿಲ್ಲ. ರಮೇಶ ಎಲ್ಲಿಗೆ ಹೋಗಿರಬಹುದು ಅಂತ ಊಹಿಸೋದಕ್ಕೂ ಪೊಲೀಸರಿಗೆ ಕಷ್ಟವಾಗಿತ್ತು. ಇನ್ನೂ ಆತನ ಮೊಬೈಲ್ ಟ್ರೇಸ್ ಮಾಡೋಣ ಅಂದ್ರೆ ಅವನ ಮೊಬೈಲ್ ಮನೆಯಲ್ಲೇ ಇತ್ತು. ಆದ್ರೆ ರಮೇಶನ ಸ್ನೇಹಿತನೇ ಆತನ ಕಥೆ ಮುಗಿಸಿದ್ದ. ಅಷ್ಟೇ ಅಲ್ಲದೇ ಅಲ್ಲಿಂದ ಮೃತದೇಹವನ್ನ ಹೊತ್ತೊಯ್ದ, ಗೋವಾ ಗಾಟ್‌ಗೆ ಎಸೆದಿದ್ದಾರೆ.

ಇದನ್ನೂ ವೀಕ್ಷಿಸಿ: ಬಂಡಾಯದ ಬೆಂಕಿಗೆ ಆಹುತಿಯಾಗುತ್ತಾ ರಷ್ಯಾ ?: ಅಂತರ್ಯುದ್ಧಕ್ಕೆ ಅಸಲಿ ಕಾರಣ ಏನು ?

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more