Apr 6, 2024, 5:38 PM IST
ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಳು ಅಂತಾರೆ. ಇವತ್ತು ನಾವು ಇದನ್ನ ಪ್ರೂವ್ ಮಾಡುವಂಥಹ ಎರಡು ಸ್ಟೋರಿಗಳನ್ನ ಹೇಳಲಿದ್ದೇವೆ. ಅವರೆಲ್ಲಾ ಒಡಹುಟ್ಟಿದ್ದವರು. ಮೂವರು ಸಹೋದರರು, 7 ಸಹೋದರಿಯರು. ಅಪ್ಪನ ಆಸ್ತಿ(Property) ಇದ್ದಿದ್ದು 2 ಎಕರೆ. ಆದ್ರೆ ಈ ಆಸ್ತಿ ಕೊನೆ ತಮ್ಮನ ಸುಪರ್ದಿಯಲ್ಲಿತ್ತು. ಅಣ್ಣಂದಿರು ಆಸ್ತಿಯಲ್ಲಿ ಪಾಲು ಕೇಳಿದ್ರೆ ತಮ್ಮ ಮಾತ್ರ ಭಾಗ ಮಾಡೋದಕ್ಕೆ ರೆಡಿ ಇರಲೇ ಇಲ್ಲ ನೋಡೋ ವರೆಗೂ ನೋಡಿದ ಅಣ್ಣಂದಿರು ಆವತ್ತು ಒಂದು ನಿರ್ಧಾರ ಮಾಡಿಕೊಂಡೇ ಜಮೀನಿಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ವೇಳೆ ಅಲ್ಲಿಗೆ ಬಂದ ತಮ್ಮ ಅಣ್ಣಂದಿರಿಂದಲೇ ಕೊಲೆಯಾಗಿ(Murder) ಹೋಗಿದ್ದ. ಆಸ್ತಿ ಭಾಗ ಮಾಡಲಿಲ್ಲ ಅಂತ ತಮ್ಮನನ್ನೇ ಅಣ್ಣಂದಿರು ಹೊಡೆದು ಕೊಂದು ಮುಗಿಸಿದ್ದಾರೆ. ಜಸ್ಟ್ 2 ಎಕೆರೆಗಾಗಿ ಇಲ್ಲಿ ಸಂಬಂಧವನ್ನೇ ಮರೆತುಬಿಟ್ಟಿದ್ದಾರೆ. ಈ ಘಟನೆ ರಾಯಚೂರಿನಲ್ಲಿ(Raichur) ನಡೆದಿದೆ.
ಅವರಿಬ್ಬರು ಸಂಬಂಧದಲ್ಲಿ ಸಹೋದರರು. ಅಣ್ಣ-ತಮ್ಮಂದಿರ ಮಕ್ಕಳು. ಆದ್ರೆ ಇಬ್ಬರ ಮದ್ಯೆ ಕುಡಿಯುವ ನೀರಿಗಾಗಿ(Drinking Water) ಕಿರಿಕ್ ಆಗಿದೆ. ಆರಂಭದಲ್ಲಿ ದೊಡ್ಡಪ್ಪನ ಮಗ ಅಜ್ಜಿ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಕಾಲೇಜಿಗೆ ಹೋಗಿದ್ದ ಚಿಕ್ಕಪ್ಪನ ಮಗ ವಾಪಸ್ ಬಂದು ಅಣ್ಣನ ಬಳಿ ಕೇಳಲು ಹೋಗಿದ್ದಾನೆ. ಅಷ್ಟೇ ,ನನ್ನನ್ನೇ ಪ್ರಶ್ನೆ ಮಾಡ್ತೀಯ ಅಂತ ಸಹೋದರ ಹೊಟ್ಟೆಗೇ ಚಾಕು ನುಗ್ಗಿಸಿಬಿಟ್ಟಿದ್ದಾನೆ. ಕುಡಿಯುವ ಹನಿ ನೀರನ್ನು ಹಿಡಿದುಕೊಳ್ಳುವ ವಿಚಾರಕ್ಕೆ ಸಹೋದರ ಸಂಬಂಧಿಗಳ ಮಧ್ಯೆ ಜಗಳವಾಗಿ(Conflict) ಕೊಲೆಯಲ್ಲಿ ಅಂತ್ಯವಾಗಿದೆ. ಕುಳಿತು ಮಾತಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಕೋಪದ ಕೈಗೆ ಬುದ್ಧಿ ಕೊಟ್ಟು ಒಬ್ಬನ ಪ್ರಾಣ ತೆಗೆದು ಜೈಲಿಗೆ ಹೋಗುವ ಪರಿಸ್ಥಿತಿ ತಂದುಕೊಂಡಿದ್ದಾರೆ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.
ಇದನ್ನೂ ವೀಕ್ಷಿಸಿ: Congress Manifesto: ಕರ್ನಾಟಕ, ತೆಲಂಗಾಣ ಮಾದರಿಯಲ್ಲೇ..ದೇಶಕ್ಕೂ ಪ್ರಣಾಳಿಕೆ: ಯುವ ಜನತೆಗೆ 5,000 ಕೋಟಿ ರೂ. ಸ್ಟಾರ್ಟಪ್ ಫಂಡ್!